ಕಾಸರಗೋಡು: ಜವಾಹರ್ ನವೋದಯ ವಿದ್ಯಾಲಯದ 32ನೇ ಹೈದರಾಬಾದ್ ಪ್ರಾದೇಶಿಕ ಬಾಸ್ಕೆಟ್‍ಬಾಲ್ ಕೂಟ ಪೆರಿಯ ಜವಾಹರ ನವೋದಯ ವಿದ್ಯಾಲಯದಲ್ಲಿ ಆರಂಭಗೊಂಡಿತು. ಬಾಸ್ಕೆಟ್‍ಬಾಲ್ ಚಾಂಪಿಯನ್‍ಶಿಪನ್ನು ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್ ಉದ್ಘಾಟಿಸಿದರು.
ಪೆರಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಕೆ.ಅರವಿಂದಾಕ್ಷನ್ ಅಧ್ಯಕ್ಷತೆ ವಹಿಸಿದ್ದರು. ಪೆರಿಯ ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಹಿದಾ ರಶೀದ್, ರಾಜ್ಯ ಬಾಸ್ಕೆಟ್ ಬಾಲ್ ಅಸೋಸಿಯೇಶನ್ ಸದಸ್ಯ ಡಾ.ಪಿ.ರಘುನಾಥ್, ಉಪಾಧ್ಯಕ್ಷ ಟಿ.ವಿ.ಗಣೇಶ್ ಕುಮಾರ್, ಪಿಟಿಸಿ ಸದಸ್ಯರಾದ ಆನಂದ್ ಮೌರ್, ಸುನೀತಾ ಜಯಚಂದ್ರನ್, ಎಕ್ಸ್ ಪಿಟಿಸಿ ಸದಸ್ಯ ಎ.ಕೆ.ರಾಜೇಂದ್ರನ್, 12ನೇ ಬ್ಯಾಚ್ ಹಳೇ ವಿದ್ಯಾರ್ಥಿಗಳಾದ ಡಾ.ಐಶ್ವರ್ಯ ರಂಜಿತ್ ಮತ್ತು ಅಭಿಮನ್ಯು ಉಪಸ್ಥಿತರಿದ್ದರು. ಪ್ರಾಂಶುಪಾಲ ಕೆ.ಎಂ.ವಿಜಯಕೃಷ್ಣನ್ ಸ್ವಾಗತಿಸಿದರು. ಜೀವಶಾಸ್ತ್ರ ವಿಭಾಗ ಶಿಕ್ಷಕ ನವೀನ್ ಕುಮಾರ್ ಭಕ್ತ ವಂದಿಸಿದರು.
ಆಗಸ್ಟ್ 5 ವರೆಗೆ ಸ್ಪರ್ಧೆಗಳು ನಡೆಯಲಿದೆ. ಹೈದರಾಬಾದ್ ಪ್ರದೇಶದ ಎಂಟು ಕ್ಲಸ್ಟರ್‍ಗಳಾದ ಅದಿಲಾಬಾದ್, ಬೆಂಗಳೂರು ಗ್ರಾಮಾಂತರ, ಬೀದರ್, ಪೂರ್ವ ಗೋದಾವರಿ, ಎರ್ನಾಕುಲಂ, ಕಡಪ, ಪಾಲಕ್ಕಾಡ್ ಮತ್ತು ಉತ್ತರ ಕನ್ನಡ ಎಂಬ ಎಂಟು ಕ್ಲಸ್ಟರ್‍ಗಳಿಂದ 19 ವರ್ಷದೊಳಗಿನ, 17 ವರ್ಷದೊಳಗಿನ ಮತ್ತು 14 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ತಂಡಗಳು ಚಾಂಪ್ಯನ್‍ಶಿಪ್‍ನಲ್ಲಿ ಪಾಲ್ಗೊಳ್ಳುತ್ತಿದೆ.