ಕಾಸರಗೋಡು: ಮದರಸದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಘಟನೆ ನಡೆದಿದೆ. 77ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ರಾಷ್ಟ್ರಧ್ವಜಾರೋಹಣ ಮಾಡುವ ವೇಳೆ ಮುಖಂಡರು ವಾಗ್ವಾದ ನಡೆಸಿದರು.
ವಿದ್ಯಾನಗರ ಸಮೀಪದ ಎರ್ದುಕಡವು ಜಮಾತ್ ಕಮಿಟಿ ಸದಸ್ಯರು ರಾಷ್ಟ್ರಧ್ವಜಾರೋಹಣ ಮಾಡುವಾಗ ಪರಸ್ಪರ ಹೊಡೆದಾಡಿಕೊಂಡರು. ಧ್ವಜಾರೋಹಣ ಹಕ್ಕು ವಿವಾದವಾಗಿತ್ತು. ಮಸೀದಿಗೆ ಸಂಬಂಧಿಸಿದ ಜನರು ಪರಸ್ಪರ ಧ್ವಜಾರೋಹಣ ಮಾಡಲು ಒಪ್ಪಲಿಲ್ಲ, ಇದು ನಂತರ ಕೈಕೈ ಮಿಸಲಾಯಿಸುವಲ್ಲಿವರೆಗೆ ಮುಂದುವರಿಯಿತು. ಎರಡು ಬಣಗಳ ನಡುವೆ ಹೊಡೆದಾಟದ ದೃಶ್ಯಗಳು ವ್ಯಾಪಕವಾಗಿ ಹರಿದಾಡಿದ್ದವು.
ಸಿರಾಜುಲ್ ಉಲೂಮ್ ಮದ್ರಸದಲ್ಲಿ ಜಮಾತ್ ಮಾಜಿ ಸದಸ್ಯ ಮುಹಮ್ಮದ್ ಹಾಗೂ ಮುಸ್ಲಿಂ ಲೀಗ್ ಚೆಂಗಳ ಪಂಚಾಯತ್ ಅಧ್ಯಕ್ಷ ಜಲೀಲ್ ಧ್ವಜಾರೋಹಣ ನೆರವೇರಿಸಿದರು. ಮುಹಮ್ಮದ್ ಮತ್ತು ಜಲೀಲ್ ಅವರು ಧ್ವಜಾರೋಹಣ ಮಾಡುವ ಹಕ್ಕಿಗೆ ಸಂಬಂಧಿಸಿ ಅವರ ನಡುವೆ ವಿವಾದ ಉಂಟಾಯಿತು. ಆದರೆ ಒಬ್ಬರನ್ನೊಬ್ಬರು ಬಿಟ್ಟುಕೊಡದೆ ಜಗಳವಾಡಿ ಕೊನೆಗೂ ಕೈಮಿಸಲಾಯಿಸುವಲ್ಲಿಗೆ ತಲಪಿತು. ಇದಕ್ಕೂ ಮುನ್ನ ಮಸೀದಿ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ಸಭೆಯಲ್ಲಿ ವಾಗ್ವಾದ ನಡೆದು ಸಾಮಾನ್ಯ ಸಮಿತಿ ಒಡೆದು ಹೋಗಿತ್ತು.