ಉಪ್ಪಳ: ಉಪ್ಪಳ ಕೋಡಿಬೈಲು ನಿವಾಸಿ, ಹಿರಿಯ ಹೋಟೆಲ್ ಉದ್ಯಮಿ ನಾರಾಯಣ ಶೆಟ್ಟಿ(64)ಸೋಮವಾರ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಧಾರ್ಮಿಕ, ಸಾಮಾಜಿಕ ಮುಖಂಡರಾಗಿದ್ದ ಇವರು ಉಪ್ಪಳದ ಪ್ರತಿಷ್ಠಿತ ಸತ್ಯನಾರಾಯಣ ಸಮೂಹ ಹೋಟೆಲ್ ಸಂಸ್ಥೆ ಪಾಲುದಾರರಾಗಿದ್ದರು. ಬಿಜೆಪಿ ಮುಖಂಡರಾಗಿದ್ದ ಇವರು ಪಕ್ಷದ ಮಂಜೇಶ್ವರ ಮಂಡಲ ಸಮಿತಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.