HEALTH TIPS

ಪರಿಹಾರ ಸೂತ್ರ ಮಂಡಿಸಿದ 'ಇಂಡಿಯಾ': ಕೇಂದ್ರ ಸರ್ಕಾರದ ತಾತ್ವಿಕ ಒಪ್ಪಿಗೆ

               ವದೆಹಲಿ: ಮಣಿಪುರದಲ್ಲಿ ನಡೆದಿರುವ ಹಿಂಸಾಚಾರ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಬೇಕು ಎಂದು ಎರಡು ವಾರದಿಂದ ಹಿಡಿದಿದ್ದ ಪಟ್ಟನ್ನು 'ಇಂಡಿಯಾ' ಮೈತ್ರಿಕೂಟದ ಸದಸ್ಯರು ಗುರುವಾರ ಕೊಂಚಮಟ್ಟಿಗೆ ಪಟ್ಟು ಸಡಿಲಿಸಿದ್ದಾರೆ.

               ರಾಜ್ಯಸಭೆಯಲ್ಲಿ ಕಲಾಪದ ಹಾದಿಯನ್ನು ಸುಗಮಗೊಳಿಸಲು ಕಣಿವೆ ರಾಜ್ಯದ ಸಂಘರ್ಷ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ನಿಯಮ 167ರ ಅಡಿ ಚರ್ಚೆ ಆರಂಭಿಸಬೇಕು ಎಂಬ 'ಬಿಕ್ಕಟ್ಟು ಪರಿಹಾರ ಸೂತ್ರ'ವನ್ನು ಮೈತ್ರಿಕೂಟದ ಸದಸ್ಯರು ಮಂಡಿಸಿದ್ದಾರೆ.

              ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ತಾತ್ವಿಕ ಒ‍ಪ್ಪಿಗೆ ನೀಡಿದ್ದು, ಮೇಲ್ಮನೆಯಲ್ಲಿ ಕಲಾಪ ಹಳಿಗೆ ಮರಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

               ಮಣಿಪುರ ಸಂಘರ್ಷವು ಸಂಸತ್‌ ಕಲಾಪವನ್ನು ನುಂಗಿ ಹಾಕಿದೆ. ಮೋದಿ ಅವರು ಎರಡೂ ಸದನಗಳಲ್ಲಿ ಹೇಳಿಕೆ ನೀಡಬೇಕು ಎಂದು 'ಇಂಡಿಯಾ' ಬಿಗಿಪಟ್ಟು ಹಿಡಿದಿತ್ತು. ಇದಕ್ಕೆ ಆಡಳಿತಾರೂಢ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

                ನಿಯಮ 267ರ ಅಡಿ ಸಂಬಂಧಿಸಿದಂತೆ ಚರ್ಚೆ ನಡೆಯಬೇಕೆಂದು 'ಇಂಡಿಯಾ'ವು ಸರ್ಕಾರದ ಮುಂದೆ ಬೇಡಿಕೆ ಇಟ್ಟಿತ್ತು. ಇದರನ್ವಯ ಕಲಾಪದಲ್ಲಿನ ಇತರೆ ವಿಷಯಗಳನ್ನು ಬದಿಗಿಟ್ಟು ಕಣಿವೆ ರಾಜ್ಯದ ಸಂಘರ್ಷದ ಬಗ್ಗೆ ಸುದೀರ್ಘ ಚರ್ಚೆ ನಡೆಸಬೇಕಿದೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕೇಂದ್ರವು ನಿಯಮ 176ರ ಅಡಿ ಚರ್ಚೆಗೆ ಸಿದ್ಧ ಎಂದು ಹೇಳಿತ್ತು. ಇದರಡಿ ಅಲ್ಪಾವಧಿಯ ಚರ್ಚೆಗೆ ಅವಕಾಶ ಇರುವುದರಿಂದ ಪ್ರತಿಪಕ್ಷಗಳು ಒಪ್ಪಿಕೊಂಡಿರಲಿಲ್ಲ.

                 ಪ್ರತಿಪಕ್ಷಗಳ ಗದ್ದಲದಿಂದ ಹೈರಾಣಾಗಿರುವ ಸರ್ಕಾರವು ಸುಗಮ ಕಲಾಪವನ್ನು ಅಪೇಕ್ಷಿಸಿದೆ. ಹಾಗಾಗಿ, ಮಧ್ಯಾಹ್ನ ರಾಜ್ಯಸಭೆಯ ಆಡಳಿತ ಪಕ್ಷದ ನಾಯಕ ಪೀಯೂಷ್‌ ಗೋಯಲ್‌ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಿದರು. ನಿಯಮ 167ರ ಅಡಿ ಚರ್ಚೆಗೆ ಸರ್ಕಾರ ಮತ್ತು ಪ್ರತಿಪಕ್ಷಗಳು ಸಮ್ಮತಿಸಿವೆ ಎಂದು ಮೂಲಗಳು ತಿಳಿಸಿವೆ.

ಮಣಿಪುರ ವಿಷಯ ಕುರಿತು ಚರ್ಚೆಗೆ ಎರಡೂ ಕಡೆಯಿಂದ ಸಹಮತ ಸೂಚಿಸಿದ್ದರೂ ಪ್ರಧಾನಿ ಮೋದಿ ಅವರು ಕಲಾಪಕ್ಕೆ ಹಾಜರಾಗಿ ಹೇಳಿಕೆ ನೀಡಬೇಕೆಂಬ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ.

                'ನಿಯಮ 167ರ ಅಡಿ ಚರ್ಚೆಗೆ ಗೋಯಲ್‌ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಆದರೆ, ಪಕ್ಷದ ವರಿಷ್ಠರೊಟ್ಟಿಗೆ ಚರ್ಚಿಸಿದ ಬಳಿಕ ಇದಕ್ಕೆ ಅಧಿಕೃತವಾಗಿ ಸಮ್ಮತಿಸಲು ನಿರ್ಧರಿಸಿದ್ದಾರೆ' ಎಂದು ಮೂಲಗಳು ತಿಳಿಸಿವೆ.

                                                        ಖರ್ಗೆ ಹೇಳಿದ್ದೇನು?:

                  'ಮೋದಿ ಅವರು ಸಂಸತ್‌ಗೆ ಬಂದು ಹೇಳಿಕೆ ನೀಡಬೇಕು. ನಮ್ಮದು ಈ ನೇರ ದಾರಿಯಲ್ಲಿನ ಪಯಣವಷ್ಟೇ. ನಾವು ಯಾವುದೇ ಒಳ ದಾರಿಗಳಲ್ಲಿ ನುಸುಳುತ್ತಿಲ್ಲ' ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

               'ಸದ್ಯ ಸರ್ಕಾರದ ಅಂಗಳಕ್ಕೆ ಚೆಂಡನ್ನು ಎಸೆದಿದ್ದೇವೆ. ಚರ್ಚೆಗೆ ಸಮಯ ನಿಗದಿಪಡಿಸುವುದು ಅವರಿಗೆ ಬಿಟ್ಟಿದ್ದು' ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries