ಕಾಸರಗೋಡು : ಪೆÇಲೀಸರನ್ನು ಕಂಡು ಪರಾರಿಯಾಗುವ ಯತ್ನದಲ್ಲಿದ್ದ ಕಾರು ಪಲ್ಟಿಯಾಗಿ ಗಂಭೀರ ಗಾಯಗೊಮಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅಂಗಡಿಮೊಗರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿ ಪೆರಾಲ್‍ಕಣ್ಣೂರು ನಿವಾಸಿ ದಿ. ಅಬ್ದುಲ್ಲ-ಸಫಿಯಾ ದಂಪತಿ ಪುತ್ರ ಫರಾಸ್(19)ಸಾವಿಗೀಡಾಗಿದ್ದಾನೆ.
ಓಣಂ ಆಚರಣೆಯ ಅಂಗವಾಗಿ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದ ಮಧ್ಯೆ ಗಸ್ತು ತಿರುಗುತ್ತಿದ್ದ ಕುಂಬಳೆ ಠಾಣೆ ಎಸ್‍ಐ ಮತ್ತು ಪೊಲೀಸರ ತಂಡ ಅಂಗಡಿಮೊಗರು ಭಾಗಕ್ಕೆ ಆಗಮಿಸಿದ್ದರು. ಪೊಲೀಸ್ ವಾಹನವನ್ನು ಕಂಡು ವಿದ್ಯಾರ್ಥಿಗಳು ಕಾರನ್ನು ಏಕಾಏಕಿ ಹಿಂದಕ್ಕೆ ತೆಗೆದಿದ್ದು, ಈ ಸಂದರ್ಭ ಪೊಲೀಸ್ ವಾಹನಕ್ಕೆ ಕಾರಿನ ಬಾಗಿಲು ಬಡಿದಿತ್ತು. ಕಾರಿನ ನಂಬರ್ ಗುರುತಿಸಲು ಪೊಲೀಸರು ಕಾರನ್ನು ಹಿಂಬಾಲಿಸಿದ್ದರು. ಕಾರಿನ ನಂಬರ್ ಖಚಿತಪಡಿಸಿಕೊಂಡ ಪೊಲೀಸರು ಅಲ್ಲಿಂದ ಅಂಗಡಿಮೊಗರಿಗೆ ವಾಪಸಾಗಿದ್ದರು. ಸುಮಾರು ನಾಲ್ಕು ಕಿಲೋಮೀಟರ್ ವರೆಗೆ ಸಂಚರಿಸಿದ ಕಾರು ವಿಕಾಸ್ ನಗರ ಎಂಬಲ್ಲಿ ಪಲ್ಟಿಯಾಗಿದೆ. ಈ ಸಂದರ್ಭ ಕಾರಿನಲ್ಲಿ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಗಂಭೀರ ಗಾಯಗೊಂಡಿದ್ದ ಫರಾಸ್‍ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸ¯ಗಿತ್ತು.
ಎಸ್.ಐ ವರ್ಗಾವಣೆ:
ಘಟನೆಗೆ ಕಾರಣರೆನ್ನಲಾದ ಠಾಣೆ ಎಸ್.ಐಯನ್ನು ಬೆರೆಡೆಗೆ ವರ್ಗಾಯಿಸುವುದರ ಜತೆಗೆ ಪೊಲೀಸ್ ಕಾನ್‍ಸ್ಟೇಬಲ್‍ನನ್ನು ಹೈವೇ ಪೆಟ್ರೋಲಿಂಗ್ ವಿಭಾಗಕ್ಕೆ ಸ್ಥಳಾಂತರಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಆದೇಶ ಹೊರಡಿಸಿದ್ದಾರೆ.