ಕಾಸರಗೋಡು: ಅಂತಾರಾಷ್ಟ್ರೀಯ ಯುವ ದಿನದ ಅಂಗವಾಗಿ ಕುಟುಂಬಶ್ರೀ ಜಿಲ್ಲಾ ಮಿಷನ್ 'ಸ್ನೇಹಿತಾ' ಜೆಂಡರ್ ಹೆಲ್ಪ್ ಡಸ್ಕ್ ವತಿಯಿಂದ ಯುವ ದಿನವನ್ನು ಆಚರಿಸಲಾಯಿತು. ಹೊಸದುರ್ಗ ಅಲಮಿಪ್ಪಳ್ಳಿ ಬಸ್ ನಿಲ್ದಾಣದ ವಠಾರದಲ್ಲಿ ಯುವ ದಿನಾಚರಣೆ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ ಕೈನಿಕರ ಉದ್ಘಾಟಿಸಿದರು.
ಕಾಞಂಗಾಡು ನಗರಸಭೆ ಸಿಡಿಎಸ್ ಅಧ್ಯಕ್ಷೆ ಕೆ.ಸುಜಿನಿ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡು ನಗರಸಭೆಯ ಅಧ್ಯಕ್ಷೆ ಕೆ.ವಿ.ಸುಜಾತಾ ಅವರು ಮೆಗಾ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವvಲ್ಸನ್ ಪಿಲಿಕೋಡ್ ಮತ್ತು ವಕೀಲ ಎಲ್.ಸಿ.ಜಾರ್ಜ್ ವಿಷಯ ಮಂಡಿಸಿದರು. ಕಾಞಂಗಾಡು ನಗರಸಭಾ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲಾ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಲತಾ, ಪಿ.ಅಹ್ಮದಲಿ, ಕೆ.ವಿ.ಸರಸ್ವತಿ,ಕೆ.ಅನೀಶನ್, ಕೆ.ಪ್ರಭಾವತಿ ಹಾಗೂ ಸ್ನೇಹಿತಾ ಜೆಂಡರ್ ಹೆಲ್ಪ್ ಡಸ್ಕ್ ಕೌನ್ಸಿಲರ್ ಇ.ಶೋಭನಾ ಉಪಸ್ಥಿತರಿದ್ದರು. ಎಡಿಎಂಸಿಡಿ ಹರಿದಾಸ್ ಸ್ವಾಗತಿಸಿದರು. ಸ್ನೇಹಿತಾ ಜೆಂಡರ್ ಹೆಲ್ಪ್ ಡಸ್ಕ್ ಕೌನ್ಸಿಲರ್ ವಿ.ವಿರಾಜಿನಿ ವಂದಿಸಿದರು. ಕಾಞಂಗಾಡು ನೆಹರು ಕಾಲೇಜಿನ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು ಮತ್ತು ಸಹಾಯಕ ಗುಂಪಿನ ಸದಸ್ಯರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.