ಕಣ್ಣೂರು: ಮುಖ್ಯಮಂತ್ರಿ ಪಿಣರಾಯಿ ವಿಜಾಟಿನ ವಂದೇ ಭಾರತ್‍ನಲ್ಲಿ ಚೊಚ್ಚಲ ಯಾತ್ರೆ ಕೈಗೊಂಡಿದ್ದಾರೆ. ಮುಖ್ಯಮಂತ್ರಿಗಳು ಇಂದು ಕಣ್ಣೂರಿನಿಂದ ಎರ್ನಾಕುಲಂಗೆ ಪ್ರಯಾಣ ಬೆಳೆಸುತ್ತಿದ್ದಾರೆ.
ವಂದೇ ಭಾರತ್ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿಯವರೊಂದಿಗೆ ಮುಖ್ಯಮಂತ್ರಿಗಳು ಭಾಗವಹಿಸಿದ್ದರೂ, ಬಳಿಕ ಇಂದು ಮೊದಲ ವಂದೇ ಭಾರತ್ ಯಾತ್ರೆ ನಡೆಸಲಾಗುತ್ತಿದೆ.
ಪುತ್ರಿ ವೀಣಾ ವಿಜಯನ್ ವಿರುದ್ಧದ ಆರೋಪ ಪ್ರಕರಣದಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವುದರಿಂದ ಭಾರೀ ಭದ್ರತೆಯಲ್ಲಿ ಪ್ರಯಾಣ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗಳು ಪ್ರಯಾಣಿಸುವ ಕೋಚ್ ಭದ್ರತಾ ಸಿಬ್ಬಂದಿಯ ನಿಯಂತ್ರಣದಲ್ಲಿತ್ತು. ಭದ್ರತೆಯ ದೃಷ್ಟಿಯಿಂದ ನಿರ್ಬಂಧ ಹೇರಲಾಗಿದೆ ಎಂದು ಪೋಲೀಸರು ಹೇಳಿದ್ದಾರೆ.
ಇದೇ ವೇಳೆ, ವಂದೇ ಭಾರತ್ ಎಕ್ಸ್‍ಪ್ರೆಸ್‍ಗೆ ನಿರಂತರ ಕಲ್ಲು ತೂರಾಟ ನಡೆಯುತ್ತಿರುವುದರಿಂದ ವಂದೇ ಭಾರತ್ ಎಕ್ಸ್‍ಪ್ರೆಸ್ ನಿಲುಗಡೆ ಹೊಂದಿರುವ ಎರ್ನಾಕುಳಂ ವರೆಗಿನ ನಿಲ್ದಾಣಗಳಲ್ಲಿ ಭಾರೀ ಭದ್ರತೆಯನ್ನು ಸಿದ್ಧಪಡಿಸಲಾಗಿತ್ತು. ರೈಲು ಹೊರಡುವ ಮುನ್ನ ಡ್ರೋನ್ ಹಾರಿಸಿ ತಪಾಸಣೆ ನಡೆಸಲಾಯಿತು.