ಬದಿಯಡ್ಕ: ಕೇರಳ ಹಿರಿಯ ನಾಗರಿಕರ ವೇದಿಕೆಯ ಬದಿಯಡ್ಕ ಘಟಕದ ಆಶ್ರಯದಲ್ಲಿ ರಾಮಾಯಣ ಮಾಸಾಚರಣೆಯ ಪ್ರಯುಕ್ತ ಪುರಾಣ ವಾಚನ ಕಾರ್ಯಕ್ರಮ ಜರಗಿತು.
ಬದಿಯಡ್ಕ ಪಂಚಾಯಿತಿ ವಯೋಜನರ ಹಗಲು ಮನೆಯಲ್ಲಿ ಶನಿವಾರ ತಾಟಕಿ ವಧೆ, ಯಜ್ಞಸಂರಕ್ಷಣೆ ಎಂಬ ಕಥಾಭಾಗವನ್ನು ಆರಿಸಲಾಗಿತ್ತು. ಪ್ರಸಿದ್ದ ಗಮಕಿ ಸ್ವರ್ಗ ಮಾಧವ ಭಟ್ ವಾಚನ ಹಾಗೂ ಶ್ಯಾಮ ಆಳ್ವ ಕಡಾರು ಪ್ರವಚನ ನಡೆಸಿಕೊಟ್ಟರು. ವೇದಿಕೆಯಲ್ಲಿ ಪೆರ್ಮುಖ ಈಶ್ವರ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ತಪ್ಪನ್ನು ಎತ್ತಿ ತೋರಿಸಿ ಸರಿದಾರಿಯತ್ತ ತೆರೆಳಿ ಸ್ವಸ್ಥ ಸಮಾಜವನ್ನು ಕಟ್ಟುವುದರಲ್ಲಿ ರಾಮಾಯಣದ ಪಾತ್ರ ಹಿರಿದಾಗಿದೆ ಎಂದರು. ನಿಕಟಪೂರ್ವ ಅಧ್ಯಕ್ಷ ಪಿಲಿಂಗಲ್ಲು ಕೃಷ್ಣ ಭಟ್, ಉಪಾಧ್ಯಕ್ಷ ಚಂದ್ರಹಾಸ ರೈ, ಕಾರ್ಯದರ್ಶಿ ಸಂಪತ್ತಿಲ ಶಂಕರನಾರಾಯಣ ಭಟ್, ಕೋಶಾಧಿಕಾರಿ ವಳಕ್ಕುಂಜ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.