ತಿರುವನಂತಪುರಂ: ಗಣಪತಿಯನ್ನು ಅವಮಾನಿಸಿ ವಿಧಾನಸಭೆ ಸ್ಪೀಕರ್ ಎಎನ್ ಶಂಸೀರ್ ಹೇಳಿಕೆ ವಿರುದ್ಧ ಹಿಂದೂ ಐಕ್ಯವೇದಿ ಡಿಜಿಪಿಗೆ ದೂರು ಸಲ್ಲಿಸಿದೆ.
ಶಂಸೀರ್ ಅವರು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಮಾತನಾಡಿದ್ದು, ಹಿಂದೂಗಳು ಅನುಸರಿಸುವ ಪವಿತ್ರ ಗ್ರಂಥಗಳ ಅವಹೇಳನ ಹಾಗೂ ಮೂಢನಂಬಿಕೆಗಳನ್ನು ಹರಡಲು ಶಂಸೀರ್ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಹೇಳಿಕೆಯಿಂದ ಹಿಂದೂ ಸಮಾಜ ಬಾಂಧವರನ್ನು ಕೆರಳಿಸಿ ಶಾಂತಿ, ಧಾರ್ಮಿಕ ಸೌಹಾರ್ದತೆಗೆ ಧಕ್ಕೆಯುಂಟು ಮಾಡಿದ್ದು, ಈ ಹೇಳಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಹಿಂದೂ ಐಕ್ಯವೇದಿ ಆಗ್ರಹಿಸಿದೆ. ಹಿಂದೂ ಐಕ್ಯವೇದಿಯ ರಾಜ್ಯಾಧ್ಯಕ್ಷೆ ಕೆ.ಪಿ.ಶಶಿಕಲಾ ಟೀಚರ್ ದೂರು ನೀಡಿದ್ದಾರೆ.
ಹಿಂದೂಗಳು ಅನುಸರಿಸುವ ಪವಿತ್ರ ಗ್ರಂಥಗಳು ಮೂಢನಂಬಿಕೆ ಮತ್ತು ಮೌಢ್ಯಗಳನ್ನು ಉತ್ತೇಜಿಸುತ್ತವೆ ಎಂದು ಶಂಸೀರ್ ಹೇಳಿಕೆ ನೀಡಿದ್ದರು. ಹಿಂದೂ ದೇವರು ಗಣೇಶನಿಗೆ ಅವಮಾನ ಮಾಡಲಾಗಿದೆ. ಇದು ಅಸಂಬದ್ಧ ಮತ್ತು ತರ್ಕಬದ್ಧವಲ್ಲ. ಶಂಸೀರ್ ಅವರು ಈ ರೀತಿಯ ಅವಮಾನ ಮಾಡುವ ಮೂಲಕ ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.