ತಿರುವನಂತಪುರಂ: ಸರ್ಕಾರದ ಹಣಕಾಸಿನ ನಿರ್ಬಂಧಗಳು ಅನೇಕರಿಗೆ ಓಣಂ ಹಬ್ಬವನ್ನು ನಿರಾಕರಿಸುವ ಸಾಧ್ಯತೆಯಿದೆ. ಕೇರಳ ಸರ್ಕಾರವು ಎದುರಿಸುತ್ತಿರುವ ಅಭೂತಪೂರ್ವ ಆರ್ಥಿಕ ಬಿಕ್ಕಟ್ಟು ಪಾವತಿ ಡೀಫಾಲ್ಟ್‍ಗಳಿಗೆ ಕಾರಣವಾಗಿದೆ. ರೈತರು ಮತ್ತು ಶಾಲಾ ಮಧ್ಯಾಹ್ನದ ಊಟದ ಕೆಲಸಗಾರರಿಂದ ವಿವಿಧ ಕಲ್ಯಾಣ ಯೋಜನೆಗಳ ಫಲಾನುಭವಿಗಳವರೆಗೆ ಸಾವಿರಾರು ಜನರ ಜೀವನದ ಮೇಲೆ ಪರಿಣಾಮ ಬೀರಿದೆ.
ಕಾಸರಗೋಡಿನ 6,000- ಎಂಡೋಸಲ್ಫಾನ್ ಸಂತ್ರಸ್ತರಿಗೆ ಸ್ನೇಹಸಾಂತ್ವನಂ ಪರಿಹಾರ ಯೋಜನೆಯಡಿ ಪಾವತಿಸಬೇಕಾದ ಮಾಸಿಕ ಪಾವತಿಯು ಏಪ್ರಿಲ್‍ನಿಂದ ಬಾಕಿ ಉಳಿದಿರುವುದರಿಂದ ಹೆಚ್ಚು ಸಮಸ್ಯೆ ಸೃಷ್ಟಿಯಾಗಿದೆ. ಇದರ ಫಲಾನುಭವಿಗಳಲ್ಲಿ ಮಕ್ಕಳು ಮತ್ತು ಹಿರಿಯ ನಾಗರಿಕರು ಸೇರಿದ್ದಾರೆ. ಅವರಲ್ಲಿ ಹೆಚ್ಚಿನವರು ಅಂಗವಿಕಲರು ಅಥವಾ ಕ್ಯಾನ್ಸರ್ ಮತ್ತು ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಮತ್ತು ವೈಯಕ್ತಿಕ ಅಗತ್ಯಗಳಿಗಾಗಿ ಇತರರ ಮೇಲೆ ಅವಲಂಬಿತರಾಗಿದ್ದಾರೆ. ಈ ಕುಟುಂಬಗಳು ತೀವ್ರ ಸಂಕಷ್ಟದಲ್ಲಿವೆ ಎನ್ನುತ್ತಾರೆ ಹೋರಾಟಗಾರ ಪಿ. ಕೃಷ್ಣನ್.
ಬಿಕ್ಕಟ್ಟಿನ ಹೊರೆ ಹೊತ್ತಿರುವುದು ಭತ್ತದ ರೈತರು. ಅವರಲ್ಲಿ ಸುಮಾರು 28,000 ಜನರು ಸರ್ಕಾರದಿಂದ ಸಂಗ್ರಹಿಸಿದ ಧಾನ್ಯಗಳಿಗೆ ಇನ್ನೂ ಪಾವತಿಯನ್ನು ಪಡೆಯಬೇಕಾಗಿದೆ. 54,000 ರೈತರಿಗೆ ಸರ್ಕಾರ ಒಟ್ಟು 433 ಕೋಟಿ ರೂ.ಬಾಕಿಯಿರಿಸಿದೆ. ಇತ್ತೀಚೆಗೆ 26 ಸಾವಿರ ರೈತರಿಗೆ 72 ಕೋಟಿ ರೂ. ಮಾತ್ರ ನೀಡಲಾಗಿದೆ.
ನಾವು ಮುಂದಿನ ಬೆಳೆ ಹಂಗಾಮಿನಲ್ಲಿದ್ದೇವೆ ಮತ್ತು ಹಿಂದಿನ ಹಂಗಾಮಿನ ಹಣವನ್ನು ಸರ್ಕಾರ ಇನ್ನೂ ನೀಡಿಲ್ಲ. ಹಣಕಾಸಿನ ಸಮಸ್ಯೆಯಿಂದ ಅನೇಕ ರೈತರು ಈ ಹಂಗಾಮಿನಲ್ಲಿ ಬಿತ್ತನೆ ಮಾಡಿಲ್ಲ ಎಂದು ದೇಸಿಯ ರೈತ ಸಮಾಜದ ಪಾಲಕ್ಕಾಡ್ ಅಧ್ಯಕ್ಷ ಮುತಾಲಂಕೋಡ್ ಮಣಿ ಹೇಳಿರುವರು.
‘ಜೂನ್‍ನಿಂದ ಶಾಲಾ ಮಧ್ಯಾಹ್ನದ ಊಟದ ಸಿಬ್ಬಂದಿಗೆ ವೇತನ ನೀಡಿಲ್ಲ’
ಸರ್ಕಾರಿ ಗುತ್ತಿಗೆದಾರರಿಗೂ ಬಿಸಿ ತಟ್ಟಿದೆ. ಸರ್ಕಾರಿ ಗುತ್ತಿಗೆದಾರರಿಗೆ ಬಿಲ್ ಪಾವತಿಗಳನ್ನು ಬಿಲ್ ಡಿಸ್ಕೌಂಟಿಂಗ್ ಸಿಸ್ಟಮ್ (ಬಿಡಿಎಸ್) ಮೂಲಕ ಪಾವತಿ ಮಾಡಲಾಗುತ್ತದೆ. ಇದರ ಅಡಿಯಲ್ಲಿ, ಸರ್ಕಾರವು ಗುತ್ತಿಗೆದಾರರಿಗೆ ಬಿಲ್ ಮೊತ್ತಕ್ಕಾಗಿ ಬ್ಯಾಂಕ್‍ಗಳು ಅಥವಾ ಕೇರಳ ಫೈನಾನ್ಶಿಯಲ್ ಕಾರ್ಪೋರೇಶನ್‍ನಿಂದ ಸಾಲವನ್ನು ವ್ಯವಸ್ಥೆ ಮಾಡುತ್ತದೆ. ಬ್ಯಾಂಕ್‍ಗಳು 10% ಬಡ್ಡಿಯನ್ನು ವಿಧಿಸುತ್ತವೆ ಮತ್ತು ಸರ್ಕಾರವು ಅದರಲ್ಲಿ ಅರ್ಧವನ್ನು ನೀಡುತ್ತದೆ.
ನಮ್ಮದಲ್ಲದ ತಪ್ಪಿಗೆ ಶೇ 5ರಷ್ಟು ಬಡ್ಡಿಯನ್ನು ನಾವು ಭರಿಸಬೇಕಾಗುತ್ತದೆ. ಬಿಡಿಎಸ್ ಕುರಿತು ಈ ತಿಂಗಳ ಆದೇಶವನ್ನು ಸರ್ಕಾರ ಇನ್ನೂ ಹೊರಡಿಸಿಲ್ಲ. ಈ ತಿಂಗಳು, ಇದು ಹಬ್ಬದ ಕಾಲವಾದ್ದರಿಂದ ನಾವು ಕಾರ್ಮಿಕರಿಗೆ ಹೆಚ್ಚುವರಿ ಪಾವತಿಗಳನ್ನು ಮಾಡಬೇಕಾಗಿದೆ ಎಂದು ಕೇರಳ ಸರ್ಕಾರಿ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಸನ್ನಿ ಚೆನ್ನಿಕ್ಕರ ಹೇಳಿರುವರು. ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಗುತ್ತಿಗೆ ಕಾರ್ಮಿಕರಿಗೆ ಮತ್ತು ದಿನಗೂಲಿಗಳಿಗೆ ಪಾವತಿಸಲು ಸರ್ಕಾರವು ಡೀಫಾಲ್ಟ್ ಮಾಡಿದೆ. ಅವರಲ್ಲಿ 13,400- ಶಾಲಾ ಮಧ್ಯಾಹ್ನ-ಊಟದ ಕೆಲಸಗಾರರು ಜೂನ್‍ನಿಂದ ವೇತನವನ್ನು ನೀಡಿಲ್ಲ.
ನಮ್ಮಲ್ಲಿ ಹೆಚ್ಚಿನವರು ನಮ್ಮ ಕುಟುಂಬಗಳಲ್ಲಿ ಏಕಾಂಗಿಯಾಗಿ ಸಂಪಾದಿಸುವ ಸದಸ್ಯರು. ಈ ಓಣಂನಲ್ಲಿ ನಾವು ನಿಜವಾದ ಬಿಕ್ಕಟ್ಟಿಗೆ ಸಿಲುಕಿದ್ದೇವೆ ಎಂದು ಶಾಲಾ ಅಡುಗೆ ತಯಾರಕ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷೆ ಎಸ್ ಶಕುಂತಲಾ ಹೇಳುತ್ತಾರೆ. 1,671 ಸಾಕ್ಷರತಾ ಪ್ರೇರಕರಿಗೆ ಏಪ್ರಿಲ್‍ನಿಂದ ಪಾವತಿಯಾಗಿಲ್ಲ.
ಪ್ರೇರಕ್ ಓರ್ವರ ಆತ್ಮಹತ್ಯೆಯ ನಂತರ ಸರ್ಕಾರವು ಪಾವತಿಯಲ್ಲಿ ಹಿಂದಿನ ಬಾಕಿಯನ್ನು ತೆರವುಗೊಳಿಸಿದೆ. ಆದರೆ, ವಿಷಯಗಳು ಮತ್ತೆ ಮೊದಲ ಹಂತಕ್ಕೆ ಮರಳಿವೆ ಎಂದು ಸಾಕ್ಷರತಾ ಪ್ರೇರಕ ಸಂಘದ ರಾಜ್ಯ ಕಾರ್ಯದರ್ಶಿ ಎ ಎ ಸಂತೋಷ್ ಹೇಳಿರುವÀರು. ಸುಮಾರು 50.90 ಲಕ್ಷ ಫಲಾನುಭವಿಗಳಿಗೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಧಿ ಮಂಡಳಿಯ ಪಿಂಚಣಿಗೆ ಜುಲೈ ಪಾವತಿ ಬಾಕಿ ಇದೆ.