ಕೊಚ್ಚಿ: ಆಲುವಾದಲ್ಲಿ ಬರ್ಬರವಾಗಿ ಹತ್ಯೆಗೀಡಾದ ಅಂಬೆಗಾಲಿಡುವ ಪಾರ್ಥಿವ ಶರೀರಕ್ಕೂ ಕೇರಳದ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ಸಂಪೂರ್ಣ ಅಗೌರವ ತೋರಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎ.ಎನ್. ರಾಧಾಕೃಷ್ಣನ್ ಟೀಕೆ ಮಾಡಿದ್ದಾರೆ. ಶಾಸಕರ ಹೊರತಾಗಿ ಯಾವುದೇ ಕಾಂಗ್ರೆಸ್ ಮುಖಂಡರಾಗಲೀ, ಸಿಪಿಎಂನ ಹೆಸರಾಂತ ನಾಯಕರಾಗಲೀ ಅಂತಿಮ ನಮನ ಸಲ್ಲಿಸಲು ಬಾರದಿರುವುದು ವಿಷಾದನೀಯ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯ ಸರ್ಕಾರ ಹಾಗೂ ಪೋಲೀಸರು ಸಂಪೂರ್ಣ ನಿರ್ಲಕ್ಷ್ಯ, ಅಗೌರವ ತೋರಿದ್ದಾರೆ. ಗ್ರಾಮಾಧಿಕಾರಿಯೂ ಹಾಜರಾಗಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ ಸ್ಥಳದಲ್ಲಿ ಹಾಗೂ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದ ಸ್ಥಳದಲ್ಲಿ ಪೆÇಲೀಸರೇ ಇಲ್ಲದಿರುವುದು ಅತ್ಯಂತ ಗಂಭೀರವಾಗಿದೆ ಎಂದು ಸ್ಪಷ್ಟಪಡಿಸಿದರು.
ಕೇರಳವು ಮಾದಕ ದ್ರವ್ಯ ಮತ್ತು ಮದ್ಯಪಾನದ ಕೇಂದ್ರವಾಗಿದೆ. ಈ ಬಗ್ಗೆ ರಾಜ್ಯದ ಆಡಳಿತ ಅಥವಾ ಪೋಲೀಸರು ಮೌನ ವಹಿಸಿದ್ದಾರೆ. ಇದರಿಂದ ಅಪರಾಧ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇರಳದಲ್ಲಿ ಶಾಂತಿಯಿಂದ ಬದುಕಲು ಸಾಧ್ಯವಿಲ್ಲ ಎಂದು ಆರೋಪಿಸಿದರು.
ಸರ್ಕಾರದ ಕ್ರಿಮಿನಲ್ ನಿರ್ಲಕ್ಷ್ಯ ಮತ್ತು ಕ್ರೂರ ಮೌನದ ವಿರುದ್ಧ ಬಿಜೆಪಿ ಆಗಸ್ಟ್ 5 ರಂದು ಅಲುವಾದಲ್ಲಿ ಉಪವಾಸ ಸತ್ಯಾಗ್ರಹವನ್ನು ಆಯೋಜಿಸಲಿದೆ ಎಂದು ರಾಧಾಕೃಷ್ಣನ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎನ್.ಎಲ್. ಜೇಮ್ಸ್ ಹಾಜರಿದ್ದರು.
ಆಲುವಾ ಕೊಲೆ ಪೆÇಲೀಸರ ಅದಕ್ಷತೆ ಬಯಲಿಗೆಳೆದಿದೆ: ಸಿಆರ್ ಪ್ರಫುಲ್ ಕೃಷ್ಣನ್
ಆಲುವಾ: ಮಹಿಳೆಯರಿಗೆ ಮತ್ತು ಮಕ್ಕಳಿಗೆ ಭದ್ರತೆ ನೀಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಯುವ ಮೋರ್ಚಾ ರಾಜ್ಯಾಧ್ಯಕ್ಷ ಸಿ.ಆರ್. ಪ್ರಫುಲ್ ಕೃಷ್ಣನ್ ಹೇಳಿದ್ದಾರೆ. ಪೋಲೀಸ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಸಿಪಿಎಂನ ರಾಜಕೀಯ ಗುಲಾಮರಾಗಿರುವ ಪೆÇಲೀಸರಿಗೆ ಕಾನೂನು ಸುವ್ಯವಸ್ಥೆ ಬಗ್ಗೆ ಕಾಳಜಿ ಇಲ್ಲ.
ಅಪರಾಧ ನಡೆದಾಗ ಏನು ಮಾಡಬೇಕೆಂದು ಕೇರಳ ಪೋಲೀಸರಿಗೆ ತಿಳಿಯುತ್ತಿಲ್ಲ. ಬಾಲಕಿಯ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫೇಸ್ ಬುಕ್ ನಲ್ಲಿ ಕ್ಷಮೆಯಾಚಿಸಿರುವುದು ಪೋಲೀಸರ ವೈಫಲ್ಯ ಹಾಗೂ ಅದಕ್ಷತೆ ಎಂದಿರುವರು.