ನವದೆಹಲಿ: ದೆಹಲಿ ಮಹಿಳಾ ಆಯೋಗ(DCW)ದ 181 ಸಹಾಯವಾಣಿಗೆ ಜುಲೈ 2022 ರಿಂದ ಜೂನ್ 2023 ರ ವರೆಗೆ 6.30 ಲಕ್ಷಕ್ಕೂ ಹೆಚ್ಚು ಕರೆಗಳು ಬಂದಿವೆ ಎಂದು ಡಿಸಿಡಬ್ಲ್ಯು ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಶನಿವಾರ ಹೇಳಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಲಿವಾಲ್, ಕಳೆದ ಒಂದು ವರ್ಷದಲ್ಲಿ ಗೃಹ ಹಿಂಸೆ, ನೆರೆಹೊರೆಯವರೊಂದಿಗೆ ಸಂಘರ್ಷ, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ, ಪೋಕ್ಸೊ, ಅಪಹರಣ ಹಾಗೂ ಸೈಬರ್ ಅಪರಾಧಗಳಂತಹ 92,004" ವಿಶಿಷ್ಟ ಪ್ರಕರಣಗಳು" ಸಹಾಯವಾಣಿ ಮೂಲಕ ದಾಖಲಾಗಿವೆ ಎಂದು ತಿಳಿಸಿದ್ದಾರೆ.
“ನಾವು DCW ನ ಮಹಿಳಾ ಸಹಾಯವಾಣಿ 181ರ ವಾರ್ಷಿಕ ಡೇಟಾವನ್ನು ಬಿಡುಗಡೆ ಮಾಡಿದ್ದೇವೆ. ಡೇಟಾದಲ್ಲಿ, DCWನ 181 ಸಹಾಯವಾಣಿಯು ಕಳೆದ 7 ವರ್ಷಗಳಲ್ಲಿ 40 ಲಕ್ಷಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿದೆ. ಕಳೆದ ವರ್ಷ 6,30,000 ಕರೆಗಳು ಬಂದಿವೆ ಎಂದು ಅವರು ಹೇಳಿದ್ದಾರೆ.
181, 24X7 ಹಾಟ್‌ಲೈನ್ ಆಗಿದ್ದು, ಸಂಕಷ್ಟದಲ್ಲಿರುವ ಮಹಿಳೆಯರಿಗೆ ನೆರವಾಗಲು DCW ಈ ಸಹಾಯವಾಣಿ ಆರಂಭಿಸಿದೆ.
ಕರೆ ಮಾಡಿದವರಿಗೆ ಸಮಾಲೋಚನೆ ನೀಡಲಾಗುತ್ತದೆ ಮತ್ತು ಅಗತ್ಯವಿದ್ದರೆ, ದೆಹಲಿ ಪೊಲೀಸ್, ಆಸ್ಪತ್ರೆಗಳು ಮತ್ತು ಆಶ್ರಯ ಮನೆಗಳಂತಹ ಕುಂದುಕೊರತೆಗಳನ್ನು ಗುರುತಿಸಿ ಪರಿಹರಿಸುತ್ತದೆ.
ಹೆಚ್ಚಿನ ಸಂದರ್ಭಗಳಲ್ಲಿ, ಅವರಿಗೆ ಸಹಾಯ ಮಾಡಲು ಸಂಕಷ್ಟದಲ್ಲಿರುವ ಮಹಿಳೆಯರನ್ನು ಭೇಟಿ ಮಾಡಲು ಸಲಹೆಗಾರರ ತಂಡವನ್ನು ಸಹ ಡಿಸಿಡಬ್ಲ್ಯು ಕಳುಹಿಸಿಕೊಡುತ್ತದೆ.