HEALTH TIPS

ಸ್ವಾತಂತ್ರ್ಯ ದಿನದಂದು ಈ ಜೈಲಿನಲ್ಲಿ ಕೈದಿಗಳಿಂದ ಕೈದಿಗಳಿಗಾಗಿ FM Radio ಆರಂಭ

Top Post Ad

Click to join Samarasasudhi Official Whatsapp Group

Qries

            ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರ ಜಿಲ್ಲಾ ಕಾರಾಗೃಹದಲ್ಲಿ ಇನ್ಮುಂದೆ ಜೈಲು ಹಕ್ಕಿಗಳಿಗಾಗಿ ಜೈಲು ಹಕ್ಕಿಗಳಿಂದಲೇ ರೇಡಿಯೊ ಸ್ವರಗಳು ಕೇಳಿಬರಲಿವೆ.

                  ಹೌದು, ಕಾನ್ಪುರ ಜಿಲ್ಲಾ ಕಾರಾಗೃಹದಲ್ಲಿ ಶೀಘ್ರದಲ್ಲೇ ಎಫ್‌ಎಂ ರೇಡಿಯೊ ಕೇಂದ್ರ ಆರಂಭವಾಗಲಿದೆ ಎಂದು ಜೈಲು ಅಧೀಕ್ಷಕರು ತಿಳಿಸಿದ್ದಾರೆ.

           ಈ ಎಫ್‌ಎಂನಲ್ಲಿ ಜೈಲಿನ ದಿನನಿತ್ಯದ ಆಗುಹೋಗುಗಳ ಜೊತೆ, ಹೊರ ಜಗತ್ತಿನ ಸುದ್ದಿ, ಸಂಗೀತ, ಮಾಹಿತಿ, ಮನರಂಜನೆ ಕಾರ್ಯಕ್ರಮಗಳು ಕೇಳಿ ಬರಲಿವೆ.

             ವಿಶೇಷವೆಂದರೆ ಕೈದಿಗಳೇ ರೇಡಿಯೊ ಜಾಕಿಗಳಾಗಿ ಕಾರ್ಯಕ್ರಮಗಳನ್ನು ಬಿತ್ತರಿಸಲು ಅವಕಾಶ ಮಾಡಿ ಕೊಡಲಾಗಿದೆ. ಕೈದಿಗಳು ಇದರಲ್ಲಿ ಪಾಲ್ಗೊಂಡು ಕಥೆ, ಕವನ, ತಮ್ಮ ವಿಶೇಷ ಪ್ರತಿಭೆಯನ್ನು ಹಂಚಿಕೊಳ್ಳಬಹುದು.

                     ಇದೇ ಆಗಸ್ಟ್ 15 ರಂದು ಸ್ವಾಂತಂತ್ರ್ಯೋತ್ಸವದಂದು ಈ ಎಫ್‌ಎಂ ರೇಡಿಯೊ ಕೇಂದ್ರ ಆರಂಭವಾಗಲಿದೆ ಎಂದು ಜೈಲು ಅಧೀಕ್ಷಕ ಬಿ.ಡಿ ಪಾಂಡೆ ತಿಳಿಸಿದ್ದಾರೆ.

                'ಈ ರೇಡಿಯೊ ಕೇಂದ್ರದ ಮೂಲಕ ನಾವು ಕೈದಿಗಳಿಗೆ ಜೈಲಿನ ದಿನನಿತ್ಯದ ಆಗುಹೋಗುಗಳ ಜೊತೆ ಹೊರ ಜಗತ್ತಿನ ಸುದ್ದಿ, ಸಂಗೀತ, ಮಾಹಿತಿ, ಮನರಂಜನೆ ಕಾರ್ಯಕ್ರಮಗಳ ಜೊತೆಗೆ ಅವರ ಏಕತಾನತೆಯನ್ನು ಹೋಗಲಾಡಿಸಿ ಮಾನಸಿಕ ಬದಲಾವಣೆಯನ್ನು ತರಲು ಶ್ರಮಿಸುತ್ತೇವೆ' ಎಂದು ಪಾಂಡೆ ಹೇಳಿದ್ದಾರೆ.

                       ಇದರ ಜೊತೆಗೆ ಕೈದಿಗಳು ಎದುರಿಸುತ್ತಿರುವ ಪ್ರಕರಣಗಳ ಲೋಕ್ ಅದಾಲತ್ ಬಗ್ಗೆ ಹಾಗೂ ಇನ್ನಿತರ ಅಗತ್ಯ ಮಾಹಿತಿಗಳನ್ನು ಬಿತ್ತರಿಸಲಾಗುತ್ತದೆ. ಫ್ರಿಕ್ವೆನ್ಸಿ ಜೈಲಿನ ಒಳಗೆ ಮಾತ್ರ ಇರಲಿದೆ. ರೇಡಿಯೊ ನಿರೂಪಕರಿಗಾಗಿ ಕೈದಿಗಳನ್ನು ಗುರುತಿಸಲಾಗಿದ್ದು ಅವರಿಗೆ ಹೊರಗಿನ ಜನಪ್ರಿಯ ರೆಡಿಯೊ ಜಾಕಿಗಳಿಂದ ತರಬೇತಿ ಕೊಡಿಸಲಾಗುತ್ತಿದೆ ಎಂದು ಪಾಂಡೆ ಮಾಹಿತಿ ನೀಡಿದ್ದಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries