ಕೊಚ್ಚಿ: ಶೋರೂಮ್ನಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಕೆಟಿಎಂ ಡ್ಯೂಕ್ ಬೈಕ್ ಅನ್ನು ಕದ್ದು ಪರಾರಿಯಾಗುತ್ತಿದ್ದ ಕೇರಳದ ಯುವಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಬಂಧಿತನನ್ನು ಯುವಕನನ್ನು ಕಿರಣ್ ಚಾಂದ್ (27) ಎಂದು ಗುರುತಿಸಲಾಗಿದೆ. ಈತ ಕುರುವತ್ತೂರು ಮೂಲದ ನಿವಾಸಿ.
ಆರೋಪಿ ಕಿರಣ್ ಬೈಕ್ ತೆಗೆದುಕೊಂಡು ನೇರವಾಗಿ ಪಾಳೆಯಡ್ನಾಡ ಬಳಿಯ ಪೆಟ್ರೋಲ್ ಬಂಕ್ಗೆ ತೆರಳಿದನು. ಆದರೆ, ಪೆಟ್ರೋಲ್ ತುಂಬಿಸಿಕೊಳ್ಳಲು ಆತನ ಬಳಿ ಹಣ ಇರಲಿಲ್ಲ. ಬಳಿಕ ಮತ್ತೊಂದು ತಂತ್ರವನ್ನು ಅನುಸರಿಸಿದ ಕಿರಣ್, ಪೆಟ್ರೋಲ್ ತುಂಬಿಸಿಕೊಂಡು, ಪೆಟ್ರೋಲ್ ಬಂಕ್ ನೌಕರನ ಮೇಲೆ ಹಲ್ಲೆ ಮಾಡಿ, ಬೈಕ್‌ನಲ್ಲಿ ವೇಗವಾಗಿ ಎಸ್ಕೇಪ್ ಆಗಲು ಯತ್ನಿಸಿದಾಗ, ಸ್ಥಳೀಯರು ಹಾಗೂ ಮತ್ತೊಬ್ಬ ನೌಕರ ಯುವಕನನ್ನು ಹಿಡಿದಿದ್ದಾರೆ. ಬಳಿಕ ಆತನನ್ನು ವಟಕರ ಠಾಣಾ ಪೊಲೀಸರಿಗೆ ಒಪ್ಪಿಸಲಾಯಿತು.
ಯುವಕನನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಆತ ಬೈಕ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಆತನ ತಪ್ಪೊಪ್ಪಿಗೆ ಪ್ರಕಾರ ನಡಕ್ಕಾವು ಪಟ್ಟಣದ ಕೆವಿಆರ್ ಶೋರಂನಲ್ಲಿ ಗ್ರಿಲ್ಸ್ ಮುರಿದು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪೆಟ್ರೋಲ್ ಬಂಕ್ನಲ್ಲಿ ಇಂಧನ ತುಂಬಿದ ನಂತರ ಆರೋಪಿ ಕಿರಣ್, ಗೂಗಲ್ ಪೇ ಮೂಲಕ ಪಾವತಿಸುವುದಾಗಿ ಹೇಳಿದ್ದಾನೆ. ಆದರೆ, ಖಾತೆಗೆ ಹಣ ಬರದಿದ್ದಾಗ ಅನುಮಾನಗೊಂಡು ಬಂಕ್ ಸಿಬ್ಬಂದಿ ಪ್ರಶ್ನೆ ಮಾಡಿದಾಗ, ಕಿರಣ್ ನಾಟಕ ಬಯಲಾಗಿದೆ. ಆತನನ್ನು ಹಿಡಿದುಕೊಳ್ಳಲು ಯತ್ನಿಸಿದಾಗ, ಬಂಕ್ನ ಒಬ್ಬ ನೌಕರನ ಮೂಗಿನ ಮೇಲೆ ಗುದ್ದಿದ್ದಾನೆ. ನಂತರ ಆತ ಸ್ಥಳದಿಂದ ಪರಾರಿಯಾಗಿದ್ದಾನೆ ಆದರೆ ಬೆನ್ನಟ್ಟಿದ ನಂತರ ಸ್ಥಳೀಯರು ಮತ್ತು ಇತರ ನೌಕರರು ಹಿಡಿದಿದ್ದಾರೆ.