ನವದೆಹಲಿ: ಹಲವಾರು ವರ್ಷಗಳ ಹಿಂದೆ ಎಲ್‌ಪಿಜಿ ಅಥವಾ ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಸದ್ದಿಲ್ಲದೆ ಹಿಂತೆಗೆದುಕೊಂಡಿದ್ದ ಕೇಂದ್ರ ಸರ್ಕಾರ ಇದೀಗ ಅದೇ ಸಿಲಿಂಡರ್‌ಗೆ 200 ರೂಪಾಯಿ ಸಬ್ಸಿಡಿಯನ್ನು ಮರುಸ್ಥಾಪಿಸಲು ನಿರ್ಧರಿಸಿದೆ.
ಕೇಂದ್ರ ಸರ್ಕಾರವು 2-3 ವರ್ಷಗಳ ಹಿಂದೆ ಗ್ರಾಹಕರ ಬ್ಯಾಂಕ್ ಖಾತೆಗೆ LPG ಸಬ್ಸಿಡಿ ಕಳುಹಿಸುವುದನ್ನು ನಿಲ್ಲಿಸಿತ್ತು. ಆದರೆ ಇದೀಗ ಲೋಕಸಭೆ ಚುನಾವಣೆ ಮುಂದಿನ ಏಳು ತಿಂಗಳಲ್ಲಿ ನಡೆಯಲಿದ್ದು ಕೇಂದ್ರದಲ್ಲಿರುವ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿರುವ ಮಧ್ಯೆ ಈ ಕ್ರಮಕ್ಕೆ ಮುಂದಾಗಿದೆ.
ಕಳೆದ ತಿಂಗಳ ಕೊನೆಯಲ್ಲಿ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಸಬ್ಸಿಡಿಯನ್ನು ಕಳುಹಿಸುತ್ತಿದೆ ಎಂಬುದನ್ನು ಇದು ಸಮರ್ಥಿಸಿಕೊಂಡಿದೆ. ಆದರೆ, ಹಲವು ವರ್ಷಗಳಿಂದ ಸಬ್ಸಿಡಿ ಮೊತ್ತ ಸಿಗುತ್ತಿಲ್ಲ ಎಂದು ಬಹುತೇಕ ಗ್ರಾಹಕರು ದೂರಿದ್ದಾರೆ.
ಕೇವಲ ಬಡವರಿಗೆ ಮತ್ತೆ 200 ರೂಪಾಯಿ ಸಬ್ಸಿಡಿಯನ್ನು ಮರುಸ್ಥಾಪಿಸುವ ನಿರ್ಧಾರವನ್ನು ಕೇಂದ್ರ ಕ್ಯಾಬಿನೆಟ್ ತೆಗೆದುಕೊಂಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಆದರೆ ಈ ಬಗ್ಗೆ ಸಂಪೂರ್ಣ ವಿವರಗಳು ಮತ್ತು ಕ್ರಮದ ಅಧಿಕೃತ ದೃಢೀಕರಣವು ಇನ್ನೂ ಲಭ್ಯವಿಲ್ಲವಾಗಿಲ್ಲ.
ಕಳೆದ ವರ್ಷ ಮೇ ತಿಂಗಳಲ್ಲಿ ಪ್ರತಿ ಬ್ಯಾರೆಲ್‌ಗೆ ಸುಮಾರು 118 ಡಾಲರ್‌ಗಳನ್ನು ತಲುಪಿದ ನಂತರ ಕಚ್ಚಾ ತೈಲ ಬೆಲೆಗಳು ಗಣನೀಯವಾಗಿ ಇಳಿದಿದ್ದರೂ ಸಹ ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಏಕೆ ಕಡಿತಗೊಳಿಸುತ್ತಿಲ್ಲ ಎಂದು ಕಳೆದ ತಿಂಗಳು ಸರ್ಕಾರವನ್ನು ಪ್ರಶ್ನಿಸಲಾಗಿತ್ತು. ಕಳೆದ ಏಳು ತಿಂಗಳಿನಿಂದ ಕಚ್ಚಾ ತೈಲ ಬೆಲೆಯು 60 ರಿಂದ 80 ಡಾಲರ್ ವ್ಯಾಪ್ತಿಯಲ್ಲಿದೆ.
ಸಬ್ಸಿಡಿಯನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಕಳೆದ ತಿಂಗಳು ರಾಜ್ಯಸಭೆಯಲ್ಲಿ ಹೇಳಿದರು.