ಸ್ಯಾನ್‌ಫ್ರಾನ್ಸಿಸ್ಕೊ: ಜನಪ್ರಿಯ ವಿಡಿಯೊ ಸ್ಟ್ರೀಮಿಂಗ್ ತಾಣ ಯುಟ್ಯೂಬ್ 'ಬಹುನೋಟ' (Multiview) ಸೌಲಭ್ಯವನ್ನು ಒದಗಿಸಿದೆ.
ಸ್ಯಾನ್‌ಫ್ರಾನ್ಸಿಸ್ಕೊ: ಜನಪ್ರಿಯ ವಿಡಿಯೊ ಸ್ಟ್ರೀಮಿಂಗ್ ತಾಣ ಯುಟ್ಯೂಬ್ 'ಬಹುನೋಟ' (Multiview) ಸೌಲಭ್ಯವನ್ನು ಒದಗಿಸಿದೆ.
ಗೂಗಲ್ ಒಡೆತನದ ಯುಟ್ಯೂಬ್ ಶನಿವಾರ ತನ್ನ ಟ್ವಿಟರ್ ಖಾತೆಯಲ್ಲಿ ಈ ವಿಚಾರ ತಿಳಿಸಿದೆ. ಮಲ್ಟಿವ್ಯುವ್ ಟಿವಿ ಎಂದರೆ ಒಂದೇ ಸ್ಮಾರ್ಟ್ ಟಿವಿಯ ಯುಟ್ಯೂಬ್ ಆಯಪ್‌ನಲ್ಲಿ ನೇರ ಪ್ರಸಾರ ಆಗುವ ಗರಿಷ್ಠ 4 ಕಾರ್ಯಕ್ರಮಗಳನ್ನು ಒಂದೇ ಬಾರಿಗೆ ನೋಡಬಹುದು.
ಸ್ಮಾರ್ಟ್ ಟಿವಿಗಳಲ್ಲಿ ಯುಟ್ಯೂಬ್ ಮೂಲಕ ಲೈವ್ ಕ್ರೀಡಾ ಪಂದ್ಯಗಳನ್ನು ನೋಡುಗರಿಗೆ ಇದು ಅನುಕೂಲ ಆಗಲಿದೆ ಎಂದು ಯುಟ್ಯೂಬ್ ತಿಳಿಸಿದೆ. ಸದ್ಯ ಇದು ಎಲ್ಲ ಯುಟ್ಯೂಬ್‌ನ ಬಳಕೆದಾರರಿಗೆ ಲಭ್ಯವಿಲ್ಲ. ಪಾವತಿಸಿ ಬಳಸುವ ಆಯ್ಕೆಯಲ್ಲಿ ಈ ಅವಕಾಶ ಇದೆ ಹಾಗೂ ಲೈವ್ ಕಾರ್ಯಕ್ರಮಗಳಿಗೆ ಮಾತ್ರ ಇದೆ ಎಂದು ತಿಳಿಸಿದೆ.
ಶೀಘ್ರದಲ್ಲಿ ಎಲ್ಲ ಬಳಕೆದಾರರಿಗೆ Multiview ಸೌಲಭ್ಯ ಲಭ್ಯವಾಗಲಿದೆ ಎಂದು ತಿಳಿಸಿದೆ. ಏಪ್ರಿಲ್‌ನಲ್ಲಿ ಆಯಪಲ್ ಕಂಪನಿ ತನ್ನ ಗ್ರಾಹಕರಿಗೆ ಬಹು ನೋಟ ಅವಕಾಶವನ್ನು ನೀಡಿತ್ತು.
ಯುಟ್ಯೂಬ್ ಜಾಗತಿಕವಾಗಿ ಅತಿದೊಡ್ದ ವಿಡಿಯೊ ಸ್ಟ್ರೀಮಿಂಗ್ ತಾಣವಾಗಿದೆ.