HEALTH TIPS

XUV 700: 1 ಲಕ್ಷ ಕಾರುಗಳಲ್ಲಿ ತಾಂತ್ರಿಕ ದೋಷ; ಪರಿಶೀಲನೆಗೆ ಮುಂದಾದ ಮಹಿಂದ್ರಾ

              ವದೆಹಲಿ: ಮಹಿಂದ್ರಾ ಅಂಡ್ ಮಹಿಂದ್ರಾ ಕಂಪನಿಯ ಸ್ಪೋರ್ಟ್ಸ್‌ ಯುಟಿಲಿಟಿ ವಾಹನ ಎಕ್ಸ್‌ಯುವಿ 700 ಕಾರಿನ ಎಂಜಿನ್‌ ಕೋಣೆಯಲ್ಲಿ ವೈರಿಂಗ್ ಸಮಸ್ಯೆ ಕಂಡುಬಂದಿದ್ದು, ಇವುಗಳನ್ನು ಪರಿಶೀಲನೆಗೆ ಒಳಪಡಿಸುವುದಾಗಿ ಕಂಪನಿ ಹೇಳಿದೆ.

                2021ರ ಜೂನ್ 8ರಿಂದ 2023ರ ಜೂನ್ 28ರವರೆಗೆ ತಯಾರಾದ 1.08 ಲಕ್ಷ ಕಾರುಗಳಲ್ಲಿ ಈ ದೋಷ ಕಂಡುಬಂದಿರುವ ಸಾಧ್ಯತೆ ಇದೆ.

              ಹೀಗಾಗಿ ಈ ಅವಧಿಯ ಎಕ್ಸ್‌ಯುವಿ 700 ಕಾರುಗಳನ್ನು ತರಿಸಿ ಅವುಗಳ ವೈರಿಂಗ್‌ ವ್ಯವಸ್ಥೆಯನ್ನು ಪರಿಶೀಲಿಸಲಾಗುವುದು. ಆ ಮೂಲಕ ಸಂಭವನೀಯ ಅಪಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕಂಪನಿ ಹೇಳಿದೆ.

              ಅದರಂತೆಯೇ 2023ರ ಫೆ. 16ರಿಂದ ಜೂನ್ 5ರವರೆಗೆ ತಯಾರಾದ 3,560 ಎಕ್ಸ್‌ಯುವಿ 400 ಕಾರುಗಳಲ್ಲಿ ಬ್ರೇಕ್‌ ಪೊಟೆನ್ಶೊಮೀಟರ್‌ನಲ್ಲಿನ ಸ್ಪ್ರಿಂಗ್‌ ಸರಿಯಾಗಿ ಕಾರ್ಯನಿರ್ವಹಿಸದಿರುವ ಸಮಸ್ಯೆಯೂ ಕಂಡುಬಂದಿದೆ.

                   ಈ ಎರಡೂ ಮಾದರಿಯ ಕಾರುಗಳಲ್ಲಿ ಕಂಡುಬಂದಿರುವ ಸಮಸ್ಯೆಗಳನ್ನು ಉಚಿತವಾಗಿ ತಪಾಸಣೆಗೆ ಒಳಪಡಿಸಿ, ಪರಿಹರಿಸಲಾಗುವುದು. ಕಾರುಗಳ ಮಾಲೀಕರನ್ನು ಕಂಪನಿಯೇ ಸಂಪರ್ಕಿಸಲಿದೆ ಎಂದು ಕಾರು ತಯಾರಿಕಾ ಕಂಪನಿ ಮಹಿಂದ್ರಾ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries