ಕಾಸರಗೋಡು: ಮರ್ಚ0ಟ್ಸ್ ಟ್ರೋಫಿ ಕೇರಳ ರಾಜ್ಯ ಅಂಡರ್-19 ಮುಕ್ತ ಹಾಗೂ ಬಾಲಕಿಯರ ಚೆಸ್ ಚಾಂಪ್ಯನ್‍ಶಿಪ್ ಸೆ. 9 ಮತ್ತು 10ರಂದು ಕಾಸರಗೋಡು ವ್ಯಾಪಾರ ಭವನದಲ್ಲಿ ಜರುಗಲಿರುವುದಾಗಿ ರಾಜ್ಯ ಚೆಸ್ ತಾಂತ್ರಿಕ ಸಮಿತಿ ಅಧ್ಯಕ್ಷ ಜೋ ಪರಪಳ್ಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾಸರಗೋಡು ಮಚರ್ಂಟ್ಸ್ ಅಸೋಸಿಯೇಶನ್ ಪಂದ್ಯಾಟ ಆಯೋಜಿಸಲಾಗಿದೆ.
ಕೇರಳ ರಾಜ್ಯ ಸ್ಪೋಟ್ರ್ಸ್ ಕೌನ್ಸಿಲ್ ಕಾರ್ಯದರ್ಶಿ ಶ್ರೀಮತಿ ಲೀನಾ ಎ ಚಾಂಪಿಯನ್‍ಶಿಪ್ ಉದ್ಘಾಟಿಸುವರು. ಕಾಸರಗೋಡು ಮಚರ್ಂಟ್ ಅಸೋಸಿಯೇಶನ್ ಘಟಕದ ಅಧ್ಯಕ್ಷ ಟಿ. ಎ. ಇಲ್ಯಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರಾಜ್ಯ ಚೆಸ್ ತಾಂತ್ರಿಕ ಸಮಿತಿ ಅಧ್ಯಕ್ಷ ಜೋ ಪರಪಳ್ಳಿ ಅಧ್ಯಕ್ಷತೆ ವಹಿಸುವರು. 10ರಂದು ನಡೆಯುವ ಸಮಾರೋಪ ಸಭೆಯಸಮಾರಂಭದಲ್ಲಿ ಕೆವಿವಿಇಎಸ್ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷರಾದ ಕೆ. ಎ. ಅಹ್ಮದ್ ಷರೀಫ್ ಬಹುಮಾನ ವಿತರಿಸುವರು. ಕಾಸರಗೋಡು ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಅಧ್ಯಕ್ಷ ಹಬೀಬ್ ರಹಿಮಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರಾಜ್ಯದ 14 ಜಿಲ್ಲೆಗಳಿಂದ ಆಯ್ಕೆಮಾಡಲಾದ 56 ಬಾಲಕರು (ಮುಕ್ತ) ಮತ್ತು 56 ಬಾಲಕಿಯರು ಚಾಂಪಿಯನ್‍ಶಿಪ್‍ನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.
ಕಾಸರಗೋಡು ಮಚರ್ಂಟ್ ಅಸೋಸಿಯೇಶನ್ ಅಧ್ಯಕ್ಷ ಟಿ. ಎ. ಇಲ್ಯಾಸ್, ದಿನೇಶ್ ಐಡಿಯಲ್, ನಹೀಂ, ಶಶಿಧರನ್, ಶ್ರೀಧರನ್ ಮಾಸ್ಟರ್ ಹಾಗೂ ರಾಜೇಶ್ ವಿ.ಎಸುದ್ದಿಗೋಷ್ಟಿಯಲ್ಲಿ ಉಪಸ್ಥಿರಯದ್ದರು.