HEALTH TIPS

ಟೈಮ್ ನ 100 ಉದಯೋನ್ಮುಖ ನಾಯಕರ ಪಟ್ಟಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಸೇರಿ ಮೂವರು ಭಾರತೀಯರು

              ನ್ಯೂಯಾರ್ಕ್: ಟೈಮ್ ನಿಯತಕಾಲಿಕ ಬಿಡುಗಡೆ ಮಾಡಿದ ಜಗತ್ತಿನ ಅಗ್ರ 100 ಉದಯೋನ್ಮುಖ ನಾಯಕರ ಪಟ್ಟಿಯಲ್ಲಿ ಮಹಿಳಾ ಕ್ರಿಕೆಟರ್ ಹರ್ಮನ್‌ಪ್ರೀತ್ ಕೌರ್ ಸೇರಿದಂತೆ ಮೂವರು ಭಾರತೀಯರು ಸ್ಥಾನ ಪಡೆದಿದ್ದಾರೆ.

                    ಬುಧವಾರ ಬಿಡುಗಡೆಯಾದ '2023 TIME100 Next: ಎಮರ್ಜಿಂಗ್ ಲೀಡರ್ಸ್ ಶೇಪಿಂಗ್ ದಿ ವರ್ಲ್ಡ್' ಪಟ್ಟಿಯಲ್ಲಿ ಭಾರತೀಯರಾದ ಹರ್ಮನ್‌ಪ್ರೀತ್ ಕೌರ್, ನಂದಿತಾ ವೆಂಕಟೇಶನ್ ಮತ್ತು ವಿನು ಡೇನಿಯಲ್ ಅವರು ಸ್ಥಾನ ಪಡೆದಿದ್ದಾರೆ. ಭಾರತೀಯ ಮೂಲದ ನಬರುನ್ ದಾಸ್‌ಗುಪ್ತಾ ಅವರು ಸಹ ಈ ಪಟ್ಟಿಯಲ್ಲಿದ್ದಾರೆ.

                ಮಹಿಳಾ ಕ್ರಿಕೆಟ್ ಅನ್ನು ವಿಶ್ವದ ಅತ್ಯಂತ ಅಮೂಲ್ಯವಾದ ಕ್ರೀಡಾ ಆಸ್ತಿಯಾಗಿ ಪರಿವರ್ತಿಸುವಲ್ಲಿ ಕೌರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಟೈಮ್ ಮ್ಯಾಗಜೀನ್ ಹೇಳಿದೆ.

                     34ರ ಹರೆಯದ ಕೌರ್ ಅವರು ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ ಆಟಗಾರ್ತಿಯರಲ್ಲಿ ವಿಶ್ವಾಸ ತುಂಬಿದ್ದಾರೆ. ಕೌರ್ ಅವರು 2017ರಲ್ಲಿ ಆಸ್ಟ್ರೇಲಿಯ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಕೇವಲ 115 ಎಸೆತಗಳಲ್ಲಿ ಔಟಾಗದೆ 171 ರನ್ ಗಳಿಸಿ ಲೆಜೆಂಡರಿ ಸ್ಥಾನಮಾನ ಪಡೆದುಕೊಂಡಿದ್ದರು. ಆಕೆಯ ಅಸಾಧಾರಣ ಪ್ರತಿಭೆಗೆ ಪ್ರೇಕ್ಷಕರು ಫಿದಾ ಆಗಿದ್ದರು ಎಂದು ಪ್ರಕಟಣೆ ತಿಳಿಸಿದೆ.

                    33 ವರ್ಷದ ನಂದಿತಾ ವೆಂಕಟೇಶನ್ ಅವರು ಕ್ಷಯರೋಗಕ್ಕೆ ಸೂಕ್ತ ಔಷಧ ಸಿಗದೇ ತಮ್ಮ ಶ್ರವಣ ಶಕ್ತೆಯನ್ನೇ ಕಳೆದುಕೊಂಡಿದ್ದಾರೆ. ಕ್ಷಯಕ್ಕೆ ಪರಿಣಾಮಕಾರಿ ದುಬಾರಿ ಔಷಧ ಹೊಂದಿರುವ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಗೆ ಮತ್ತೊಮ್ಮೆ ಪೇಟೆಂಟ್ ನೀಡಬಾರದು ಎಂದು ಅರ್ಜಿ ಸಲ್ಲಿಸಿ ಗೆದ್ದಿದ್ದಾರೆ. ಪರಿಣಾಮ ದೇಶದಲ್ಲಿ ಕಡಿಮೆ ಬೆಲೆಯಲ್ಲಿ ಕ್ಷಯ ರೋಗಕ್ಕೆ ಜನೆರಿಕ್ ಔಷಧ ಸಿಗುತ್ತಿದೆ. 

                ವಾಲ್‌ಮೇಕರ್ಸ್ ಎಂಬ ಸ್ಟುಡಿಯೊವನ್ನು ಹೊಂದಿರುವ ವಿನು ಡೆನಿಯಲ್ ಅವರು, ಕೇರಳದ ಕೂಲಿ ಕಾರ್ಮಿಕರು, ಮೆಸ್ತ್ರಿಗಳು, ಸ್ಥಳೀಯರಿಂದ ಪ್ರೇರಣೆ ಪಡೆದು ಕಡಿಮೆ ವೆಚ್ಚದಲ್ಲಿ ಮನೆ ಕಟ್ಟುವ ಕ್ರಮವೊಂದನ್ನು ಸಿದ್ಧಪಡಿಸಿದ್ದಾರೆ.


    ಕಾಮೆಂಟ್‌‌ ಪೋಸ್ಟ್‌ ಮಾಡಿ

    0 ಕಾಮೆಂಟ್‌ಗಳು
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    Qries

    Below Post Ad


    ಜಾಹಿರಾತು














    Qries