ಬದಿಯಡ್ಕ: ತುಳುವರೆ ಆಯನೊ ಕೂಟ ಕಾಸರಗೋಡು ಇವರ ನೇತೃತ್ವದಲ್ಲಿ ಕೇರಳ ಸರಕಾರದ ಪಬ್ಲಿಕ್ ಪ್ರೋಸಿಕ್ಯೂಟರ್ (ಫೋಕ್ಸೋ) ನ್ಯಾಯವಾದಿ ಪ್ರಕಾಶ್ ಅಮ್ಮಣ್ಣಾಯ ಬದಿಯಡ್ಕ ಅವರಿಗೆ ಪೌರ ಸನ್ಮಾನ ಸಮಾರಂ`À ಬದಿಯಡ್ಕ ವಳಮಲೆಯಲ್ಲಿರುವ ಇರಾ ಸಭಾ ಭವನದಲ್ಲಿ ಸೆ.10 ಭಾನುವಾರ ನಡೆಯಲಿರುವುದು. ಫೋಕ್ಸೋ ಪ್ರಕರಣದ 100ಕ್ಕಿಂತ ಹೆಚ್ಚು ಆರೋಪಿಗಳಿಗೆ ಶಿಕ್ಷೆಯಾಗುವಲ್ಲಿ ಅವರು ಪ್ರಬಲವಾಗಿ ವಾದಿಸಿದ್ದರು. ಅಂದು ಬೆಳಗ್ಗೆ 10.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ತುಳುವರೆ ಆಯೊನೊ ಕೂಟದ ಅಧ್ಯಕ್ಷ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಗೌರವಾನ್ವಿತ ನ್ಯಾಯಮೂರ್ತಿ ಅರಳಿ ನಾಗರಾಜ ಗಂಗಾವತಿ ಉದ್ಘಾಟಿಸಲಿದ್ದಾರೆ. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು.
ಉದುಮ ಶಾಸಕ ಸಿ.ಎಚ್.ಕುಞಂಬು, ಬದಿಯಡ್ಕ ಗ್ರಾಪಂ ಅಧ್ಯಕ್ಷೆ ಶಾಂತಾ ಬಿ., ನ್ಯಾಯವಾದಿ ಮೋಹನ್ ಕುಮಾರ್ ಬಿ., ನ್ಯಾಯವಾದಿ ಪಿ.ಪಿ.ಶ್ಯಾಮಲಾದೇವಿ, ನ್ಯಾಯವಾದಿ ಮಣಿಕಂಠನ್ ನಂಬ್ಯಾರ್, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬದಿಯಡ್ಕ ಘಟಕ ಅಧ್ಯಕ್ಷ ಕುಂಜಾರು ಮುಹಮ್ಮದ್, ಬದಿಯಡ್ಕ ಪೊಲೀಸ್ ಠಾಣಾಧಿಕಾರಿ ವಿನೋದ್ ಕುಮಾರ್, ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಜನಪ್ರತಿನಿಗಳಾದ ಶೈಲಜಾ ಎಸ್.ಭಟ್, ಅಶ್ವಿನಿ ಭಟ್, ರಷೀದ ಹಮೀದ್ ಕೆಡೆಂಜಿ ಹಾಗೂ ಇನ್ನಿತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.