ತಿರುವನಂತಪುರಂ: ಬೇಸಿಗೆಯ ಬೇಗೆಯಲ್ಲಿ ಕೇರಳೀಯರು ಸರಿಸುಮಾರು 100 ಕೋಟಿ ಮೌಲ್ಯದ ಬಾಟಲಿ ನೀರು ಕುಡಿದಿದ್ದಾರೆ. ಈ ವರ್ಷ ಜನವರಿಯಿಂದ ಆಗಸ್ಟ್‍ವರೆಗಿನ ಎಂಟು ತಿಂಗಳ ಅವಧಿಯಲ್ಲಿ ಇಷ್ಟು ಪ್ರಮಾಣದ ನೀರು ಬಳಕೆಯಾಗಿದೆ.
ರಾಜ್ಯದಲ್ಲಿ ಬಿಸಿಲ ತಾಪ ಹೆಚ್ಚಿರುವುದೇ ಬಾಟಲಿ ನೀರು ಮಾರಾಟ ಹೆಚ್ಚಾಗಲು ಕಾರಣ.
ಓಣಂ ಸಮಯದಲ್ಲಿಯೇ ರಾಜ್ಯದಲ್ಲಿ ಶೇ 20ರಷ್ಟು ಹೆಚ್ಚುವರಿ ಮಾರಾಟ ನಡೆದಿದೆ. ಒಂದು ಲೀಟರ್ ಬಾಟಲಿ ನೀರಿಗೆ ಹೆಚ್ಚು ಬೇಡಿಕೆಯಿದೆ. ಅಗತ್ಯ ನೋಡಿ ದೊಡ್ಡ ಕಂಪನಿಗಳು ಹೆಚ್ಚು ನೀರು ಸಂಗ್ರಹಿಸಿ ಮಾರುಕಟ್ಟೆಗೆ ತಂದಿದ್ದವು. ರಾಜ್ಯವೊಂದರಲ್ಲೇ ಸುಮಾರು 270 ಬಾಟಲಿ ನೀರು ತಯಾರಿಕಾ ಘಟಕಗಳಿವೆ. ಸಣ್ಣ ಕಂಪನಿಗಳೂ ಪೈಪೆÇೀಟಿಯಲ್ಲಿವೆ. ರಾಜ್ಯದಲ್ಲಿ ಪ್ರತಿದಿನ ಒಂದು ಲೀಟರ್ ನೀರಿನ ಸುಮಾರು 60,000 ಬಾಟಲಿಗಳು ಮಾರಾಟವಾಗುತ್ತವೆ ಎಂದು ಅಂದಾಜಿಸಲಾಗಿದೆ. ರಾಜ್ಯದಲ್ಲಿ ಲೀಟರ್ ಬಾಟಲಿ ನೀರಿನ ಬೆಲೆ 20 ರೂ.ವಿನಷ್ಟಿದೆ.
ಮಾರುಕಟ್ಟೆಯಲ್ಲಿ ಅರ್ಧ ಲೀಟರ್ ಬಾಟಲಿ ನೀರು ಲಭ್ಯವಿದ್ದರೂ, ಇವುಗಳನ್ನು ಹೆಚ್ಚಾಗಿ ವಿವಾಹ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. ಅರ್ಧ ಲೀಟರ್ ನೀರಿನ ಬಾಟಲ್ ಬೆಲೆ 10 ರೂ. ಅಲ್ಲದೆ ಎರಡು ಲೀಟರ್ ಬಾಟಲ್ ನೀರು ಮತ್ತು 20 ಲೀಟರ್ ಜಾರ್ ಗೆ ಬೇಡಿಕೆ ಇದೆ.
20 ಲೀಟರ್ ಜಾರ್ ಕಚೇರಿಗಳು ಮತ್ತು ಮನೆಗಳಲ್ಲಿ ಹೆಚ್ಚು ಬೇಡಿಕೆಯಿದೆ. ರಾಜ್ಯದಲ್ಲಿ ಅಕ್ರಮವಾಗಿ ಬಾಟಲಿ ನೀರು ಮಾರಾಟವೂ ನಡೆಯುತ್ತಿದೆ. ರಾಜ್ಯದಲ್ಲಿ ಕೇವಲ ನೀರಿನ ಬಾಟಲಿ ತುಂಬಲು ಪರವಾನಿಗೆ ಪಡೆದವರೇ ಅಕ್ರಮವಾಗಿ ಬಾಟಲ್ ನೀರು ಮಾರಾಟ ಮಾಡುತ್ತಿದ್ದಾರೆ ಎಂದು ಸ್ವತಃ ವ್ಯಾಪಾರಿಗಳೇ ಒಪ್ಪಿಕೊಳ್ಳುತ್ತಾರೆ.