ಮಧ್ಯಪ್ರದೇಶ: 108 ಅಡಿ ಎತ್ತರದ ಶಂಕರಾಚಾರ್ಯರ ಭವ್ಯ ಪ್ರತಿಮೆಯನ್ನು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಇಂದು ಓಂಕಾರೇಶ್ವರದಲ್ಲಿ ಅನಾವರಣಗೊಳಿಸಿದರು.
108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣಗೊಳಿಸಿದ ಸಿಎಂ ಶಿವರಾಜ್ ಸಿಂಗ್ ಚೌಹಾಣ್
0
ಸೆಪ್ಟೆಂಬರ್ 22, 2023
Tags
ಮಧ್ಯಪ್ರದೇಶ: 108 ಅಡಿ ಎತ್ತರದ ಶಂಕರಾಚಾರ್ಯರ ಭವ್ಯ ಪ್ರತಿಮೆಯನ್ನು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಇಂದು ಓಂಕಾರೇಶ್ವರದಲ್ಲಿ ಅನಾವರಣಗೊಳಿಸಿದರು.
ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಚೌಹಣ್, 'ಆದಿ ಗುರು ಶಂಕರಾಚಾರ್ಯ ಮಹಾರಾಜರು ದೇಶವನ್ನು ಸಾಂಸ್ಕೃತಿಕವಾಗಿ ಸಂಪರ್ಕಿಸಲು ಶ್ರಮಿಸಿದರು. ವೇದಗಳ ಸಾರವನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸವನ್ನು ಅವರು ಮಾಡಿದರು. ದೇಶದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಠಗಳನ್ನೂ ಸ್ಥಾಪಿಸಿದರು. ಭಾರತವನ್ನು ಸಾಂಸ್ಕೃತಿಕವಾಗಿ ಒಗ್ಗೂಡಿಸಲು ಇದು ಕೆಲಸ ಮಾಡಿದೆ. ಆ ಕಾರಣದಿಂದ ಭಾರತ ಇಂದು ಒಗ್ಗಟ್ಟಾಗಿದೆ' ಎಂದು ಹೇಳಿದರು.