ತಿರುವನಂತಪುರಂ: ಆಧಾರ್ ಮಾಹಿತಿಯನ್ನು ನವೀಕರಿಸುವ ಗಡುವನ್ನು ಮತ್ತೆ ವಿಸ್ತರಿಸಲಾಗಿದೆ. ಈ ಹಿಂದೆ ಸೆಪ್ಟೆಂಬರ್ 14ರವರೆಗೆ ಆಧಾರ್ ಅಪ್ ಡೇಟ್ ಮಾಡಲು ಅವಕಾಶವಿತ್ತು.
ಆಧಾರ್ ನವೀಕರಣದ ಗಡುವನ್ನು ಮೂರು ತಿಂಗಳು ವಿಸ್ತರಿಸಲಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಇದೀಗ ಪ್ರಕಟಿಸಿದೆ. ಆಧಾರ್ ಅನ್ನು ನವೀಕರಿಸಲು ಗ್ರಾಹಕರಿಗೆ ಡಿಸೆಂಬರ್ 14, 2023 ರವರೆಗೆ ಸಮಯವಿರುತ್ತದೆ.
ಆನ್‍ಲೈನ್ ನವೀಕರಣ ಮಾಡುವವರಿಗೆ ಈ ಸೇವೆ ಉಚಿತವಾಗಿದೆ. ಗ್ರಾಹಕರು ಆಫ್‍ಲೈನ್ ಕೇಂದ್ರಗಳಲ್ಲಿ ಶುಲ್ಕ ಪಾವತಿಸಬೇಕು. 10 ವರ್ಷಗಳ ಮೊದಲು ತೆಗೆದುಕೊಂಡಿರುವ ಎಲ್ಲಾ ಆಧಾರ್ ಕಾರ್ಡ್‍ಗಳನ್ನು ನವೀಕರಿಸಬೇಕು ಎಂದು ಯುಐಡಿಎಐ ತಿಳಿಸಿದೆ. ಹೆಸರು, ವಿಳಾಸ ಇತ್ಯಾದಿಗಳಲ್ಲಿ ಯಾವುದೇ ಬದಲಾವಣೆಯಾಗಿದ್ದರೆ ಬಳಕೆದಾರರು ನವೀಕರಿಸಬೇಕು.
ಆಧಾರ್ ಕಾರ್ಡ್ ಅನ್ನು ಹೇಗೆ ನವೀಕರಿಸುವುದು
* myaadhaar.uidai.gov.in ವೆಬ್‍ಸೈಟ್ ತೆರೆಯಿರಿ
* 'ನನ್ನ ಆಧಾರ್' ಮೆನು ಆಯ್ಕೆಮಾಡಿ
* 'ನಿಮ್ಮ ಆಧಾರ್ ಅನ್ನು ನವೀಕರಿಸಿ' ಆಯ್ಕೆಯನ್ನು ಆರಿಸಿ
* ನಂತರ 'ಅಪ್‍ಡೇಟ್' ಕ್ಲಿಕ್ ಮಾಡಿ ಮತ್ತು 'ಮುಂದುವರಿಸಿ' ಆಯ್ಕೆಮಾಡಿ
* ನಂತರ ಬರುವ ಕಾಲಂನಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಿ
* ಕ್ಯಾಪ್ಚಾ ಪರಿಶೀಲನೆಯನ್ನು ಒದಗಿಸಿ
ನಂತರ ಸ್ವೀಕರಿಸಿದ ಔಖಿP ಅನ್ನು ನಮೂದಿಸಿ *
* 'ಅಪ್‍ಡೇಟ್ ಡೆಮೊಗ್ರಾಫಿಕ್ಸ್ ಡೇಟಾ' ಆಯ್ಕೆಯನ್ನು ಆಯ್ಕೆಮಾಡಿ
* ನವೀಕರಿಸಲು ಆಯ್ಕೆಯನ್ನು ಆರಿಸಿ
* ಹೊಸ ವಿವರಗಳನ್ನು ನಮೂದಿಸಿ
* ಅಗತ್ಯವಿರುವ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‍ಲೋಡ್ ಮಾಡಿ
* ಒದಗಿಸಿದ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ
* OTP ಯೊಂದಿಗೆ ಮೌಲ್ಯೀಕರಿಸಿ
ಇವಿಷ್ಟರ ಬಳಿಕ, ಆಧಾರ್‍ನೊಂದಿಗೆ ಲಿಂಕ್ ಮಾಡಲಾದ ಪೋನ್ ಸಂಖ್ಯೆಯು ನವೀಕರಣವನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ತಿಳಿಸುವ ಎಸ್.ಎಂ.ಎಸ್. ಅನ್ನು ಸ್ವೀಕರಿಸುತ್ತದೆ. ಆಧಾರ್‍ನಲ್ಲಿರುವ ಇತರ ವಿವರಗಳನ್ನು ಸಹ ಅದೇ ರೀತಿಯಲ್ಲಿ ನವೀಕರಿಸಬಹುದು.