ಕಾಸರಗೋಡು: 2023-24ನೇ ಸಾಲಿನ ರಾಜ್ಯ ಸಿವಿಲ್ ಸರ್ವೀಸ್ ಟೂರ್ನಮೆಂಟ್‍ನಲ್ಲಿ ಭಾಗವಹಿಸುವ ಜಿಲ್ಲಾ ತಂಡಗಳನ್ನು ಆಯ್ಕೆ ಮಾಡಲು ಕಾಸರಗೋಡು ಜಿಲ್ಲಾ ಸಿವಿಲ್ ಸರ್ವೀಸ್ ಸೆಲೆಕ್ಷನ್ ಟ್ರಯಲ್ಸ್ ಸೆಪ್ಟೆಂಬರ್ 11ರಿಂದ 13ರ ವರೆಗೆ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ. ಬೆಳಿಗ್ಗೆ 8.30ರಿಂದ ವಿವಿಧ ಸ್ಥಳಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸೆಪ್ಟೆಂಬರ್ 11 ರಂದು ಕಾಸರಗೋಡು ಮುನ್ಸಿಪಾಲ್ ಸ್ಟೇಡಿಯಂ ವಿದ್ಯಾನಗರದಲ್ಲಿ ಅತ್ಲೆಟಿಕ್ಸ್, 12 ರಂದು ಪಳ್ಳಿಕೆರೆ ಬೇಕಲದ ಸಿರ್ವ ಅಕ್ವಾಟಿಕ್ ಸೆಂಟರ್‍ನಲ್ಲಿ ಬಾಸ್ಕೆಟ್ ಬೋಲ್, ಕೇಂದ್ರಿಯ ವಿದ್ಯಾಲಯ ನಂಬರ್ 2 ಉದಯಗಿರಿ, ವಾಲಿಬಾಲ್, ಕಬಡ್ಡಿ, ಉದಯಗಿರಿ ಸ್ಪೋಟ್ರ್ಸ್ ಅಕಾಡೆಮಿಯಲ್ಲಿ, ಕ್ರಿಕೆಟ್ ಕಾಸರಗೋಡು ಸರ್ಕರಿ ಕಾಲೇಜು ಮೈದನದಲ್ಲಿ, ಫುಟ್ಬಾಲ್ ಕಾಸರಗೋಡು ಮುನ್ಸಿಪಾಲ್ ಸ್ಟೇಡಿಯಂ ವಿದ್ಯಾನಗರ್‍ನಲ್ಲಿ, ಶಟಲ್ ಬ್ಯಾಡ್ಮಿಂಟನ್ ಕಲೆಕ್ಟರೇಟ್ ಇಂಡೋರ್ ಸ್ಟೇಡಿಯಂನಲ್ಲಿ, ಕ್ಯಾರಮ್ಸ್ ಕಾಸರಗೋಡು ಕಲೆಕ್ಟರೇಟ್‍ನಲ್ಲಿ, 13 ರಂದು ಟೇಬಲ್ ಟೆನ್ನಿಸ್, ಚೆಸ್, ರಸ್ಲಿಂಗ್, ಪವರ್ ಲಿಫ್ಟಿಂಗ್, ವೆಯಿಟ್ ಲಿಫ್ಟಿಂಗ್, ಬೆಸ್ಟ್ ಫಿಸಿಕ್, ಹಾಕಿ ಉದಯಗಿರಿ ಸ್ಪೋಟ್ರ್ಸ್ ಅಕಾಡೆಮಿಯಲ್ಲಿ, ಲಾನ್ ಟೆನ್ನಿಸ್ ನಾಯಮರ್‍ಮೂಲ ಟೆನ್ನಿಸ್ ಅಕಾಡೆಮಿಯಲ್ಲಿ ಜರುಗಲಿದೆ. ಜಿಲ್ಲಾ ಮಟ್ಟದ ಸಿವಿಲ್ ಸರ್ವೀಸ್ ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಅರ್ಜಿ ಮತ್ತು ಅಧಿಕಾರಿಗಳು ದೃಢೀಕರಿಸಿದ ಎಲಿಜಿಬಿಲಿಟಿ ಸರ್ಟಿಫಿಕೇಟ್ ಸಹಿತ ಸೆಪ್ಟೆಂಬರ್ 5 ರ ಮೊದಲು ಉದಯಗಿರಿಯ ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಆಫೀಸಿಗೆ ತಲುಪಿಸಬೇಕು. ಈ ಬಗ್ಗೆ ಮಾಹಿತಿಗೆ ದೂರವಾಣೀ ಸಂಕ್ಯೆ(04994 255521, 9946049004)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.