ಬರೂಚ್: ಭಾನುವಾರದಿಂದ ಗುಜರಾತ್‌ನಲ್ಲಿ ಭಾರಿ ಮಳೆಯಾಗುತ್ತಿದ್ದು, ವಡೋದರ, ಬರೂಚ್, ನರ್ಮದಾ, ದಹೊಡ್, ಪಂಚಮಹಲ್, ಆನಂದ್ ಹಾಗೂ ಗಾಂಧಿನಗರ ಜಿಲ್ಲೆಯ ತಗ್ಗು ಪ್ರದೇಶದ 11,900 ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. 270 ಮಂದಿಯನ್ನು ರಕ್ಷಣೆ ಮಾಡಲಾಗಿದೆ.
ರಸ್ತೆಗೆ ಮರಗಳು ಬಿದ್ದಿದ್ದು, ಅವುಗಳನ್ನು ತೆರವುಗೊಳಿಸುವ ಕಾರ್ಯಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.