ಕೋಝಿಕ್ಕೋಡ್: ನಿಪಾ ಸೋಂಕಿತರ ಸಂಪರ್ಕ ಪಟ್ಟಿಯಲ್ಲಿರುವವರ ಪರೀಕ್ಷಾ ಫಲಿತಾಂಶ ಧನಾತ್ಮಕವಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ನಿಪಾ ಪರೀಕ್ಷೆಗೆ ಕಳುಹಿಸಲಾದ ಮಾದರಿಗಳಲ್ಲಿ ಇಂದಿನ ವರದಿಯ ಪ್ರಕಾರ 11 ನೆಗೆಟಿವ್ ಆಗಿದೆ. ಸದ್ಯ ಯಾವುದೇ ಹೊಸ ಪಾಸಿಟಿವ್ ಪ್ರಕರಣಗಳಿಲ್ಲ, ಚಿಕಿತ್ಸೆ ಪಡೆಯುತ್ತಿರುವ 9 ವರ್ಷದ ಬಾಲಕನ ಸ್ಥಿತಿ ಸುಧಾರಿಸಿದೆ ಎಂದು ಸಚಿವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಂಪರ್ಕ ಪಟ್ಟಿಯಲ್ಲಿರುವ ಇತರ ಜಿಲ್ಲೆಗಳ ಜನರ ಮಾದರಿ ಪರೀಕ್ಷೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು. ಮೊನೊಕ್ಲೋನಲ್ ಪ್ರತಿಕಾಯವನ್ನು ಬಳಸುವ ಬಗ್ಗೆ ಕೇಂದ್ರದೊಂದಿಗೆ ಚರ್ಚೆಗಳು ನಡೆಯುತ್ತಿವೆ. ನಿನ್ನೆ ಪಾಸಿಟಿವ್ ಆದ ಇಬ್ಬರಿಗೆ ಯಾವುದೇ ರೋಗಲಕ್ಷಣಗಳಿಲ್ಲದಿರುವುದು ಆತಂಕಕಾರಿಯಾಗಿದೆ. ಅದೇ ರೀತಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಆ್ಯಂಟಿಬಾಡಿ ನೀಡುವ ಅಗತ್ಯವಿಲ್ಲ ಎನ್ನುತ್ತಾರೆ ಚಿಕಿತ್ಸೆ ನೀಡುತ್ತಿರುವ ವೈದ್ಯರು. ಇತರೆÀಡೆಗಳಿಂದÀ ಪ್ರತಿಕಾಯಗಳನ್ನು ತಲುಪಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಕೇಂದ್ರವನ್ನು ಕೋರಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿದರು.
ಇದೇ ವೇಳೆ, ಸಂಪರ್ಕ ಪಟ್ಟಿಯಲ್ಲಿರುವ ಜನರನ್ನು ಹುಡುಕುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಪೋಲೀಸರ ಸಹಾಯದಿಂದ, ಆರೋಗ್ಯ ಕಾರ್ಯಕರ್ತರು ಮೊದಲು ನಿಧನರಾದ ವ್ಯಕ್ತಿ ತೆರಳಿದ್ದ ಸ್ಥಳಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ. ಮಾರುತೋಣಕರ ನಿವಾಸಿಗಳು ರೋಗದ ಲಕ್ಷಣಗಳ ಹಿಂದಿನ ದಿನಗಳಲ್ಲಿ ಹೋಗಿದ್ದ ಸ್ಥಳಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಸಚಿವರು ಹೇಳಿದರು. ಹೀಗಾಗಿ ಜಿಲ್ಲೆಯಲ್ಲಿ ನಿರ್ಬಂಧ ಮುಂದುವರಿಯಲಿದೆ.