HEALTH TIPS

ಭಾರತ-ಆಸಿಯಾನ್ ಸಹಕಾರ ಬಲಪಡಿಸಲು 12 ಅಂಶಗಳ ಪ್ರಸ್ತಾವನೆ ಮಂಡಿಸಿದ ಪ್ರಧಾನಿ ಮೋದಿ

           ಜಕಾರ್ತಾ: ಡಿಜಿಟಲ್ ಪರಿವರ್ತನೆ, ವ್ಯಾಪಾರ ಮತ್ತು ಆರ್ಥಿಕ ತೊಡಗಿಸಿಕೊಳ್ಳುವಿಕೆಯಂತಹ ಕ್ಷೇತ್ರಗಳಲ್ಲಿ ಭಾರತ-ಆಸಿಯಾನ್ ಸಹಕಾರವನ್ನು ಬಲಪಡಿಸುವ 12 ಅಂಶಗಳ ಪ್ರಸ್ತಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮಂಡಿಸಿದರು.

              ಇಂಡೋನೇಷ್ಯಾ ರಾಜಧಾನಿ ಜಕಾರ್ತಾದಲ್ಲಿ ನಡೆದ 20ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು. ಆಸಿಯಾನ್‌ನ ಪ್ರಧಾನ ಕಾರ್ಯದರ್ಶಿ(ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ಡಾ ಕಾವೊ ಕಿಮ್ ಹರ್ನ್ ಕೂಡ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

              ಶೃಂಗಸಭೆಯಲ್ಲಿ ಎರಡು ಜಂಟಿ ಹೇಳಿಕೆಗಳು - ಒಂದು ಕಡಲ ಸಹಕಾರ ಮತ್ತು ಇನ್ನೊಂದು ಆಹಾರ ಭದ್ರತೆಯ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(MEA) ಪ್ರಕಟಣೆಯಲ್ಲಿ ತಿಳಿಸಿದೆ.

             ಶೃಂಗಸಭೆಯಲ್ಲಿ, ಆಸಿಯಾನ್-ಭಾರತದ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಅದರ ಭವಿಷ್ಯದ ಕೋರ್ಸ್ ಅನ್ನು ರೂಪಿಸುವ ಕುರಿತು ಆಸಿಯಾನ್ ಪಾಲುದಾರರೊಂದಿಗೆ ಪ್ರಧಾನಿ ಮೋದಿ ವ್ಯಾಪಕ ಚರ್ಚೆ ನಡೆಸಿದರು ಎಂದು ಪ್ರಕಟಣೆ ತಿಳಿಸಿದೆ.

                  ಪ್ರಧಾನಿ ಮೋದಿ ಅವರು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಆಸಿಯಾನ್ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದರು ಮತ್ತು ಆಸಿಯಾನ್-ಭಾರತ ಮುಕ್ತ ವ್ಯಾಪಾರ ಒಪ್ಪಂದದ(ಎಐಟಿಜಿಎ) ಪರಿಶೀಲನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದರು.

               ಸಂಪರ್ಕ, ಡಿಜಿಟಲ್ ಪರಿವರ್ತನೆ, ವ್ಯಾಪಾರ ಮತ್ತು ಆರ್ಥಿಕ ತೊಡಗಿಸಿಕೊಳ್ಳುವಿಕೆ, ಭಯೋತ್ಪಾದನೆಯಂತಹ ಸಮಕಾಲೀನ ಸವಾಲುಗಳನ್ನು ಎದುರಿಸುವುದು, ಜನರಿಂದ ಜನರ ಸಂಪರ್ಕಗಳು ಮತ್ತು ಕಾರ್ಯತಂತ್ರವನ್ನು ಗಾಢವಾಗಿಸುವ ಭಾರತ-ಆಸಿಯಾನ್ ಸಹಕಾರ ಬಲಪಡಿಸುವ 12 ಅಂಶಗಳ ಪ್ರಸ್ತಾವನೆಯನ್ನು ಪ್ರಧಾನಿ ಮೋದಿ ಮಂಡಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries