ಮಲಪ್ಪುರಂ: ಮಲಪ್ಪುರಂ ವಲಂಚೇರಿಯ ಮುತ್ತಜ್ಜಿಯೊಬ್ಬರು ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ. ಆದರೆ ಈ ಸತ್ಯ ಅನೇಕರಿಗೆ ತಿಳಿದಿರುವುದಿಲ್ಲ. ಆಕೆಯ ಹೆಸರು ಕುಂಞÂೀಟ್ಟುಮ್ಮ, ದಿವಂಗತ ಕಲಾಂಬನ್ ಸೈದಾಲಿ ಅವರ ಪತ್ನಿ. ಅವರು ಮಲಪ್ಪುರಂನ ವಲಂಚೇರಿ ಬಳಿಯ ಪೂಕ್ಕಟ್ಟಿರಿಯಲ್ಲಿ ನೆಲೆಸಿದ್ದಾರೆ.
ಅವರ ಆಧಾರ್ ಕಾರ್ಡ್ ವಿವರಗಳ ಪ್ರಕಾರ, ಕುಂಞÂ್ಞೀಟ್ಟುಮ್ಮ ಅವರು ಜೂನ್ 2, 1903 ರಂದು ಜನಿಸಿದವರು. ಮಂಗಳವಾರದ ವೇಳೆಗೆ ಅವರಿಗೆ 120 ವರ್ಷ ಮತ್ತು 97 ದಿನಗಳು ತುಂಬಿವೆ. ಇದಕ್ಕೆ ವ್ಯತಿರಿಕ್ತವಾಗಿ, ಗಿನ್ನೆಸ್ ವಲ್ರ್ಡ್ ರೆಕಾಡ್ರ್ಸ್ ವೆಬ್‍ಸೈಟ್ ಸ್ಪೇನ್‍ನ ಮಾರಿಯಾ ಬ್ರನ್ಯಾಸ್ ಮೊರೆರಾವನ್ನು ಜಾಗತಿಕ ಹಿರಿಯ ವ್ಯಕ್ತಿ ಎಂದು ಗುರುತಿಸುತ್ತದೆ. ಮಾರ್ಚ್ 4, 1907 ರಂದು ಜನಿಸಿದ ಮೊರೆರಾ ಅವರು ಮಂಗಳವಾರ 116 ವರ್ಷ 219 ದಿನಗಳನ್ನು ಪೂರೈಸಿದರು, ಕುಂಞÂ್ಞೀಟ್ಟುಮ್ಮ ಅವರಿಗಿಂತ ನಾಲ್ಕು ವರ್ಷ 122 ದಿನಗಳು ಕಿರಿಯವರಾಗಿದ್ದಾರೆ. ಗಿನ್ನಿಸ್ ವಿಶ್ವ ದಾಖಲೆಯ ಅಧಿಕಾರಿಗಳಿಗೆ ಕುಂಞÂ್ಞೀಟ್ಟುಮ್ಮ ಅವರ ಅಸ್ತಿತ್ವದ ಬಗ್ಗೆ ತಿಳಿದಿಲ್ಲ ಎಂದು ತೋರುತ್ತದೆ. ಗಮನಾರ್ಹವಾಗಿ, ಕುಂಞÂ್ಞೀಟ್ಟುಮ್ಮ ಬೇರೆಯವರಂತೆ ಇತರರೊಂದಿಗೆ ಸಂವಹನ ನಡೆಸಬಲ್ಲರು. ಅವರು 115 ನೇ ವಯಸ್ಸಿನಲ್ಲಿ ಬಿದ್ದಾಗಿನಿಂದ ತಿರುಗಾಡಲು ಗಾಲಿಕುರ್ಚಿಯನ್ನು ಬಳಸುತ್ತಿದ್ದಾರೆ.
ಮಧುಮೇಹ, ಬಿಪಿ ಮತ್ತು ಕೊಲೆಸ್ಟ್ರಾಲ್ ಸೇರಿದಂತೆ ಆರೋಗ್ಯ ಸಮಸ್ಯೆಗಳಿಂದ ಮುಕ್ತಳಾಗಿರುವುದರಿಂದ ಆಕೆಗೆ ಯಾವುದೇ ಔಷಧಿಗಳ ಅಗತ್ಯವಿಲ್ಲ. ಕುಂಞïಟ್ಟುಮ್ಮ ತನ್ನ ಆಹಾರವಾಗಿ ಸಾಮಾನ್ಯವಾಗಿ ಗಂಜಿ ಸೇವಿಸುವುದು ವಾಡಿಕೆ. ಯಾರಾದರೂ ಬಿರಿಯಾನಿ ನೀಡಿದರೆ, ಅದನ್ನು ನೀಡುವವರನ್ನು ಸಂತೋಷಪಡಿಸಲು ಹಳ ಕಡಿಮೆ ಪ್ರಮಾಣದಲ್ಲಿ ಸ್ವೀಕರಿಸುತ್ತಾರೆ. ಇವರು ಮದ್ರಸದಿಂದ ಧಾರ್ಮಿಕ ಶಿಕ್ಷಣ ಪಡೆದರು. ತನ್ನ ಶಿಕ್ಷಣದ ಬಗ್ಗೆ ಅವರು ಹೇಳುತ್ತಾ, “ನನಗೆ ಶಾಲೆಗೆ ಹೋಗಲು ಅವಕಾಶವಿರಲಿಲ್ಲ. ಈಗ, ಈ ವಯಸ್ಸಿನಲ್ಲಿ ನಾನು ಕಲಿಯುವ ಸಾಮಥ್ರ್ಯವನ್ನು ಹೊಂದಿಲ್ಲ ” ಎನ್ನುತ್ತಾರೆ. 17 ನೇ ವಯಸ್ಸಿನಲ್ಲಿ, ಕುಂಞÂ್ಞೀಟ್ಟುಮ್ಮ ಅವರು ಸೈದಾಲಿ ಅವರನ್ನು ವಿವಾಹವಾದರು. ಅವರಿಗೆ 13 ಮಕ್ಕಳಿದ್ದರು. ಪ್ರಸ್ತುತ, ಅವರಲ್ಲಿ ನಾಲ್ವರು ಮಾತ್ರ ಜೀವಂತವಾಗಿದ್ದಾರೆ. 11 ನೇ ಮಗು ಮೊಯ್ದು ಅವರ ಜೊತೆ ಇದೀಗ ವಾಸಿಸುತ್ತಿದ್ದಾರೆ.
1921 ರ ಮಲಬಾರ್ ದಂಗೆಯ ಸಮಯದಲ್ಲಿ ಹತ್ತಿರದ ಪ್ರದೇಶಗಳಿಂದ ಬಂದೂಕಿನ ಗುಂಡುಗಳನ್ನು ಕೇಳಿ ಹೆದರುತ್ತಿದ್ದೆ ಎಂದು ಕುಂಞÂ್ಞೀಟ್ಟಮ್ಮ ಈಗಲೂ ನೆನಪಿಸುತ್ತಾರೆ. ಖಿಲಾಫತ್ ಆಂದೋಲನದ ಸಂದರ್ಭ ಪತಿಯನ್ನು ಬ್ರಿಟಿಷ್ ಸೈನಿಕರು ಸೆರೆಹಿಡಿದು ನಾಲ್ಕು ತಿಂಗಳ ನಂತರ ಬಿಡುಗಡೆಗೊಳಿಸಿದ್ದರು ಎಂದು ಅವರು ನೆನಪಿಸಿಕೊಂಡರು.