ಕಾಸರಗೋಡು: ಕುಟುಂಬಶ್ರೀ ಜಿಲ್ಲಾಮಿಷನ್ ಕುಂಬಳೆ, ಚೆಮ್ನಾಡು ಗ್ರಾಮ ಪಂಚಾಯಿತಿ ಕರಾವಳಿ ಕಮ್ಯೂನಿಟಿ ವಾಲಂಟಿಯರ್ ಹುದ್ದೆಗೆ ಸಂದರ್ಶನ ಸಎ. 12 ರಂದು ಮಧ್ಯಾಹ್ನ 2 ಗಂಟೆಗೆ ಕುಟುಂಬಶ್ರೀ ಕಾಸರಗೋಡು ಜಿಲ್ಲಾ ಮಿಷನ್ ಕಚೇರಿಯಲ್ಲಿ ನಡೆಯಲಿದೆ.
ಅರ್ಹ ಅಭ್ಯರ್ಥಿಗಳು ಕುಂಬಳೆ, ಚೆಮ್ನಾಡ್ ಗ್ರಾಮಪಂಚಾಯಿತಿಗಳ ಕರಾವಳಿ ಪ್ರದೇಶದಲ್ಲಿ ವಾಸಿಸುವವರಾಗಿದ್ದು, ವಯಸ್ಸಿನ ಮಿತಿ 21 ರಿಂದ 45 ವರ್ಷಗಳ ನಡುವೆ ಆಗಿರಬೇಕು. ಹೈಯರ್ ಸೆಕೆಂಡರಿ ಯಾ ತತ್ಸಮಾನ ವಿದ್ಯಾರ್ಹತೆಯಾಘಿದ್ದು, ಕುಟುಂಬಶ್ರೀಯ ಸದಸ್ಯರಾಗಿರಬೇಕು. ಅಭ್ಯರ್ಥಿಯು ಕನಿಷ್ಠ 3 ವರ್ಷಗಳ ಕಾಲ ಕುಟುಂಬಶ್ರೀಯ ಸದಸ್ಯರಾಗಿರಬೇಕು. ಕುಟುಂಬಶ್ರೀ ಕಾರ್ಯದರ್ಶಿ ಯಾ ಅಧ್ಯಕ್ಷ, ಎ.ಡಿ.ಎಸ್ ಅಧ್ಯಕ್ಷ ಯಾ ಕಾರ್ಯದರ್ಶಿ, ಸಿ.ಡಿ.ಎಸ್ ಅಧ್ಯಕ್ಷರು ಎಂಬುದನ್ನು ದೃಢೀಕರಿಸುವ ಅರ್ಜಿ ಸಲ್ಲಿಸಬೇಕು. ಕಂಪ್ಯೂಟರ್ ಜ್ಞಾನವನ್ನೂ ಹೊಂದಿರಬೇಕು. ಅಭ್ಯರ್ಥಿಗಳು ನಿರ್ದಿಷ್ಟ ಮಾದರಿಯ ಅರ್ಜಿಯನ್ನು ಭರ್ತಿ ಮಾಡಿ ಮೂಲ ಪ್ರಮಾಣಪತ್ರಗಳೊಂದಿಗೆ ಸಕಾಲಕ್ಕೆ ತಲುಪಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 256111, 9447006242)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.