ಕಾಸರಗೋಡು: ಕುಂಬಳೆ ಸನಿಹದ ಅನಂತಪುರ ಕೈಗಾರಿಕಾ ಪ್ರಾಂಗಣಕ್ಕೆ ಹೆಚ್ಚಿನ ಉದ್ಯಮಗಳು ತಲುಪುತ್ತಿದ್ದು, ಹೂಡಿಕೆ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳನ್ನು ತೆರೆಯುವ ನಿಟ್ಟಿನಲ್ಲಿ ಮತ್ತೆ 13 ಉದ್ಯಮಗಳನ್ನು ಪ್ರಾರಂಭಿಸಲಾಗುವುದು. ಟೆಸ್ಲಾ ಎನರ್ಜಿ, ಲೈಫ್‍ಗಾರ್ಡ್ ರೂಫಿಂಗ್‍ಎಂಟರ್‍ಪ್ರೈಸಸ್, ಗೋಲ್ಡ್ ಸ್ಟಾರ್, ಕೊಚ್ಚಿನ್ ಶೆಲ್ ಪ್ರಾಡಕ್ಟ್ಸ್, ವಿಡ್‍ಲುಕ್ ಜಾಯಿನರೀಸ್, ಅವರ್ ಓನ್ ರೆಡಿಮಿಕ್ಸ್, ಅಹಾನಾ ಕೋರ್, ಬಿಬಿಸಿ ಡ್ಯೂರೊ, ವಲ್ಲಿಕಾಟ್ ಎಂಜಿನಿಯರಿಂಗ್, ಎಕ್ಸ್‍ಪೆÇೀರ್ಟ್ ಆಗ್ರೋ, ಎಂಕೆ ಫರ್ನಿಚರ್, ಎಎಂಕೆ ಸ್ಟೀಲ್ಸ್ ಮತ್ತು ಸ್ಟಾರ್ ವುಡ್ ಫರ್ನಿಚರ್ ಕಂಪನಿಗಳ ಘಟಕಗಳು ಅನಂತಪುರ ಕೈಗಾರಿಕಾ ಪ್ರಾಂಗಣದಲ್ಲಿ ಕಾರ್ಯಾರಂಭಗೊಳ್ಳಲಿದೆ. ಒಟ್ಟು 13 ಕಂಪನಿಗಳು ಅನಂತಪುರಂನಲ್ಲಿ 36.7 ಕೋಟಿ ರೂ. ಹೂಡಿಕೆಯೊಂದಿಗೆ ಉದ್ದಿಮೆ ಆರಂಭಿಸಲಿದ್ದು, 322 ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲಿದೆ. ಈ ಘಟಕಗಳಿಗೆ ಎರಡು ವರ್ಷಗಳ ಹಿಂದೆ ಅನಂತಪುರಂನಲ್ಲಿ ಭೂಮಿ ಮಂಜೂರು ಮಾಡಲಾಗಿದೆ. ಅನಂತಪುರ ಎಸ್ಟೇಟ್‍ನಲ್ಲಿ 108 ಮತ್ತು 103 ಎಕರೆಗಳಲ್ಲಿ ಎರಡು ಎಸ್ಟೇಟ್‍ಗಳು ಕಾರ್ಯಾಚರಿಸುತ್ತಿದೆ. ಪ್ರಸ್ತುತ ಅನಂತಪುರದ 108 ಎಕರೆ ಎಸ್ಟೇಟ್‍ನಲ್ಲಿ 44 ಉದ್ದಿಮೆಗಳಿಗೆ 95.1 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಎರಡನೇ ಕೈಗಾರಿಕಾ ವಸಾಹತು ಪ್ರದೇಶದಲ್ಲಿ 103 ಎಕರೆಯಲ್ಲಿ 83.72 ಎಕರೆ ಭೂಮಿಯನ್ನು 55 ಉದ್ದಿಮೆಗಳಿಗೆ ನೀಡಲಾಗಿದೆ.
18ರಂದು ಉದ್ಘಾಟನೆ:
ಅನಂತಪುರಂ ಕೈಗಾರಿಕಾ ವಸಾಹತು ಪ್ರದೇಶದಲ್ಲಿ 13 ಉದ್ಯಮಗಳನ್ನು ಬ್ರಃತ್ ಕೈಗಾರಿಕೆ ಮತ್ತು ಹುರಿಹಗ್ಗ ಖಾತೆ ಸಚಿವ ಪಿ.ರಾಜೀವ್ ಸೆ. 18ರಂದು ಬೆಳಗ್ಗೆ 9ಕ್ಕೆ ಉದ್ಘಾಟಿಸಲಿದ್ದಾರೆ. ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಘಿ ಭಾಗವಹಿಸುವರು. ಅನಂತಪುರಂ ಕೈಗಾರಿಕಾ ವಸಾಹತು ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಉದ್ಯಮಿಗಳು, ರಾಜಕೀಯ ಪಕ್ಷದ ಪ್ರತಿನಿಧಿಗಳು ಭಾಗವಹಿಸುವರು.