HEALTH TIPS

ಪಾಕಿಸ್ತಾನದಲ್ಲಿ ಭಯೋತ್ಪಾದನೆಯ ಸಂಚು ವಿಫಲ: 13 ಶಂಕಿತ ಉಗ್ರರ ಬಂಧನ

             ಲಾಹೋರ್‌: ಪಂಜಾಬ್ ಪ್ರಾಂತ್ಯದ ಪ್ರಮುಖ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲು ರೂಪಿಸಿದ್ದ ಭಯೋತ್ಪಾದಕರ ಸಂಚನ್ನು ಪಾಕಿಸ್ತಾನದ ಪೊಲೀಸರು ವಿಫಲಗೊಳಿಸಿದ್ದಾರೆ. ಈ ಸಂಬಂಧ 13 ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಇವರಲ್ಲಿ ಬಹುತೇಕರು ನಿಷೇಧಿತ ಇಸ್ಲಾಮಿಕ್ ಸ್ಟೇಟ್ (ಐಎಸ್) ಮತ್ತು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ)ನವರು ಎಂದು ಪೊಲೀಸರು ತಿಳಿಸಿದ್ದಾರೆ.

              ಭಯೋತ್ಪಾದನೆಯ ಕೃತ್ಯಗಳನ್ನು ತಡೆಯಲು ಗುಪ್ತಚರ ವರದಿಗಳನ್ನು ಆಧಾರವಾಗಿಟ್ಟುಕೊಂಡು ಪಂಜಾಬ್‌ ಪ್ರಾಂತ್ಯದ ಹಲವು ಜಿಲ್ಲೆಗಳಲ್ಲಿ 83 ಕಾರ್ಯಾಚರಣೆಗಳನ್ನು ನಡೆಸಲಾಯಿತು. ಈ ವೇಳೆ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಇತರ ನಿಷೇಧಿತ ಸಾಮಗ್ರಿಗಳೊಂದಿಗೆ 13 ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ಭಯೋತ್ಪಾದನಾ ನಿಗ್ರಹ ದಳ (ಸಿಟಿಡಿ) ತಿಳಿಸಿದೆ.

ಬಂಧಿತರು ಐಎಸ್‌ (ದೀಶ್‌), ಟಿಟಿಪಿ ಮತ್ತು ಲಷ್ಕರ್-ಎ-ಜಾಂಗ್ವಿ ಉಗ್ರಗಾಮಿ ಗುಂಪುಗಳಿಗೆ ಸೇರಿದವರಾಗಿದ್ದಾರೆ ಎಂದು ಸಿಟಿಡಿ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries