ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಾರ್ಷಿಕ ಸಮನ್ವಯ ಸಭೆ ಸೆ.14ರಿಂದ ಮೂರು ದಿನ ಪುಣೆಯಲ್ಲಿ ನಡೆಯಲಿದೆ. ರಾಷ್ಟ್ರೀಯ ಭದ್ರತೆ, ದೇಶದ ಸಾಮಾಜಿಕ-ಆರ್ಥಿಕ ಸ್ಥಿತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ.
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಾರ್ಷಿಕ ಸಮನ್ವಯ ಸಭೆ ಸೆ.14ರಿಂದ ಮೂರು ದಿನ ಪುಣೆಯಲ್ಲಿ ನಡೆಯಲಿದೆ. ರಾಷ್ಟ್ರೀಯ ಭದ್ರತೆ, ದೇಶದ ಸಾಮಾಜಿಕ-ಆರ್ಥಿಕ ಸ್ಥಿತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಪ್ರಮುಖ ಮುಖಂಡರು, ಬಿಜೆಪಿಯಲ್ಲಿನ ಸಂಘದ ಪ್ರತಿನಿಧಿ ಅರುಣ್ ಕುಮಾರ್ ಮತ್ತು ಇತರ ಪ್ರಮುಖ ಪ್ರತಿನಿಧಿಗಳು ಭಾಗವಹಿಸುವರು.
ಸಮನ್ವಯ ಸಭೆಯು ಸೆ.16ರಂದು ಮುಕ್ತಾಯವಾಗಲಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಆರ್‌ಎಸ್‌ಎಸ್‌ನಿಂದ ಪ್ರೇರೇಪಿತವಾಗಿರುವ ಇತರೆ 35 ಸಂಘಟನೆಗಳ ಮುಖ್ಯಸ್ಥರು ಭಾಗವಹಿಸುವರು. ಸಮನ್ವಯ ಸಭೆಯು ಕಳೆದ ವರ್ಷ ಛತ್ತೀಸಗಢದಲ್ಲಿ ನಡೆದಿತ್ತು.
ರಾಷ್ಟ್ರೀಯ ಸೇವಿಕ ಸಮಿತಿ, ವಿಶ್ವ ಹಿಂದೂ ಪರಿಷತ್, ವನವಾಸಿ ಕಲ್ಯಾಣ ಆಶ್ರಮ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಭಾರತೀಯ ಕಿಸಾನ್ ಸಂಘ, ವಿದ್ಯಾಭಾರತಿ, ಭಾರತೀಯ ಮಜ್ದೂರ್ ಸಂಘ, ಸಂಸ್ಕಾರ ಭಾರತಿ, ಸೇವಾ ಭಾರತಿ, ಸಂಸ್ಕೃತ ಭಾರತಿ ಈ 35 ಸಂಘಟನೆಗಳಲ್ಲಿ ಸೇರಿವೆ.
ಸಂಘಟನೆಗಳ ಮುಖ್ಯಸ್ಥರು ಸಾಮಾಜಿಕ ಬದುಕಿನ ವಿವಿಧ ಸ್ತರಗಳಲ್ಲಿ ತಮ್ಮ ಕಾರ್ಯ, ಅನುಭವ ಕುರಿತು ಮಾತನಾಡಲಿದ್ದಾರೆ. ಸಾಮಾಜಿಕ ಬದಲಾವಣೆಗಾಗಿ ಮಾಡಬಹುದಾದ ಕಾರ್ಯಗಳ ಕುರಿತೂ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಸಾಮಾಜಿಕ ಸೌಹಾರ್ದ, ಪರಿಸರ, ಸಂಘದ ಕೌಟುಂಬಿಕ ಸಮಾಲೋಚನೆ ಕಾರ್ಯಕ್ರಮ, ಸಾಮಾಜಿಕ, ಆರ್ಥಿಕತೆ, ರಾಷ್ಟ್ರೀಯ ಭದ್ರತೆ ಹಾಗೂ ಪ್ರಚಲಿತ ರಾಷ್ಟ್ರೀಯ ವಿದ್ಯಮಾನಗಳ ಕುರಿತು ವಿಸ್ತೃತವಾದ ಚರ್ಚೆ ನಡೆಯಲಿದೆ ಎಂದು ಮೂಲಗಳು ವಿವರಿಸಿವೆ.