ಮುಂಬೈ: ಇಲ್ಲಿನ ಉಪನಗರ ಒಶಿವಾರದಲ್ಲಿರುವ ಹೀರಾ ಪನ್ನಾ ಮಾಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 14 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ: ಇಲ್ಲಿನ ಉಪನಗರ ಒಶಿವಾರದಲ್ಲಿರುವ ಹೀರಾ ಪನ್ನಾ ಮಾಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 14 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಶಿವಾರ ಪೊಲೀಸ್ ಠಾಣೆ ಸಮೀಪದಲ್ಲಿರುವ ನಾಲ್ಕು ಮಹಡಿಯ ಮಾಲ್‌ನಲ್ಲಿ ಶುಕ್ರವಾರ ಮಧ್ಯಾಹ್ನ 3.10ಕ್ಕೆ ಬೆಂಕಿ ಕಾಣಿಸಿಕೊಂಡಿತ್ತು.
ಇದೇ ವೇಳೆ ಮೂವರು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಒಟ್ಟ 7 ಮಂದಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.
ಸಿಬ್ಬಂದಿಯನ್ನು ಗೊರೆಗಾಂವ ಅಗ್ನಿಶಾಮಕ ಠಾಣೆಯ ಸಂದೀಪ್ ಮಾರುತಿ ಪಾಟಿಲ್, ರಾಜು ಉತ್ತಮ ಶಿಂಗಾರ್ಕರ್ ಹಾಗೂ ಯೋಗೇಶ್ ಕೊಂಡಾವರ್ ಎಂದು ಗುರುತಿಸಲಾಗಿದೆ. ಕೊಂಡಾವರ್ ಅವರಿಗೆ ಉಸಿರಾಟದ ಸಮಸ್ಯೆ ಜೊತೆಗೆ ಸುಟ್ಟಗಾಯಗಳೂ ಆಗಿವೆ. ಮೂವರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದ ಇತರ ನಾಲ್ವರ ಪೈಕಿ ಇಬ್ಬರನ್ನು ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಉಳಿದ ಇಬ್ಬರನ್ನು ಕೊಕಿಲಾಬೆನ್ ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಿಸಲಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅವಘಡ ಸಂಭವಿಸಿರಬಹುದು ಎನ್ನಲಾಗಿದೆ.