ಕಾಸರಗೋಡು: ವಿದ್ಯಾನಗರ ಸರ್ಕಾರಿ ಕಾಲೇಜು ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಕಾಸರಗೋಡಿನ ಸಾಂಸ್ಕøತಿಕ ವೈವಿಧ್ಯ ಕುರಿತು 2023 ನವಂಬರ 14ರಿಂದ16ರವರೆಗೆ ಮೂರು ದಿವಸಗಳ ಅಂತಾರಾಷ್ಟ್ರೀಯ ಸಮಾವೇಶವನ್ನು ಆಯೋಜಿಸುತ್ತಿದೆ. ಕೇರಳ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಪ್ರಾಯೋಜಕತ್ವದಲ್ಲಿ ನಡೆಯುವ ಈ ಸಮಾವೇಶದಲ್ಲಿ ಅಂತರಾಷ್ಟ್ರೀಯ ಮಟ್ಟದ ವಿಷಯ ತಜ್ಞರು ಭಾಗವಹಿಸಲಿದ್ದಾರೆ.
ಉಪನ್ಯಾಸಗಳು ಮತ್ತುಕಾರ್ಯಾಗಾರಗಳ ಹೊರತಾಗಿ ಕಾಲೇಜು ಅಧ್ಯಾಪಕರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಪ್ರಬಂಧ ಮಂಡನೆಗೆ ಸಮಾವೇಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಂಶೋಧನಾ ಪ್ರಬಂಧಗಳನ್ನು ಮಂಡಿಸುವವರಿಗೆ ವಿವಿಧ ವಿಷಯ ನೀಡಲಾಗಿದ್ದು, ಇವುಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳಬಹುದಾಗಿದೆ. ಕಾಸರಗೋಡಿನ ಭಾಷೆ ಮತ್ತುಸಾಹಿತ್ಯ, ಕಾಸರಗೋಡಿನ ರಂಗಭೂಮಿ, ಕಾಸರಗೋಡಿನ ಜಾ£ಪದ ಸಂಪ್ರದಾಯಗಳು-ಆಚರಣೆಗಳು, ಕಾಸರಗೋಡಿನ ಮಾಧ್ಯಮ, ಕಾಸರಗೋಡಿನ ಕಲೆ ಮತ್ತು ವಾಸ್ತುಶಿಲ್ಪ ಎಂಬ ವಿಷಯಗಳನ್ನು ನೀಡಲಾಗಿದೆ. ಸಂಶೋಧನ ಸಮಸ್ಯೆ, ಆಕರ ಸಾಮಗ್ರಿ ಮತ್ತು ವೈಧಾನಿಕತೆಯ ಸಂಕ್ಷಿಪ್ತ ಮಾಹಿತಿಯನ್ನೊಳಗೊಂಡ 200 ಪದಗಳ ಮಿತಿಯ ಸಾರಲೇಖಗಳನ್ನು ಸೆ. 30ರ ಮುಂಚಿತವಾಗಿ ಸಲ್ಲಿಸಬೇಕು. ಸಾರಲೇಖ ಸಲ್ಲಿಕೆಯಾದ ಏಳು ದಿವಸಗಳ ಒಳಗೆ ಸ್ವೀಕೃತಿಯ ಮಾಹಿತಿಯನ್ನು ನೀಡಲಾಗುತ್ತದೆ. ಸಾರಲೇಖಗಳನ್ನು https://docs.google.com/forms/d/e/1FAIpQLSfkK0xfXAlQTtggA8rEx2Xqm3qzyJZe_vs1xE0Kug5R59aeTQ/viewform?usp=sf_link ಗೆ ಸಲ್ಲಿಸಬೇಕು. 6000 ದಿಂದ 8000 ಪದಗಳ ವ್ಯಾಪ್ತಿಯ ಪೂರ್ಣ ಪ್ರಮಾಣದ ಸಂಶೋಧನ ಪ್ರಬಂಧಗಳನ್ನು 2023 ನವಂಬರ 10ರ ಒಳಗೆ ಸಲ್ಲಿಸಬೇಕಾಗಿದೆ. ತಿದ್ದುಪಡಿಗಳಿದ್ದಲ್ಲಿ ಸಮಾವೇಶ ಕಳೆದು ಒಂದುತಿಂಗಳ ಒಳಗೆ ಪೂರ್ಣ ಪ್ರಬಂಧವನ್ನು ಸಲ್ಲಿಸಬೇಕು. ತಜ್ಞರ ಸಮಿತಿ ಆಯ್ಕೆ ಮಾಡಿದ ಉತ್ತಮ ಸಂಶೋಧನಾ ಪ್ರಬಂಧಗಳನ್ನು ನಡಾವಳಿ ಅಥವಾ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಈ ಆಂತಾರಾಷ್ಟ್ರೀಯ ಸಮಾವೇಶದಲ್ಲಿ ಪ್ರಬಂಧ ಮಂಡಿಸುವವರಿಗೆ ಮತ್ತು ಭಾಗವಹಿಸುವವರಿಗೆ ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ. ದಿನ ಭತ್ಯೆ ಮತ್ತು ಪ್ರಯಾಣ ಭತ್ಯೆಯನ್ನೂ ನೀಡಲಾಗುವುದಿಲ್ಲ. ಈ ಬಗ್ಗೆ ಹೆಚ್ಚಿನ ಮಾತಿಗಾಗಿ ಸಮಾವೇಶದ ಸಂಚಾಲಕ ಡಾ.ಬಾಲಕೃಷ್ಣ ಹೊಸಂಗಡಿ ಅವರನ್ನು bಞ.hosಚಿಟಿgಚಿಜi@gಛಿಞ.ಚಿಛಿ.iಟಿ ಸಂಪರ್ಕಿಸಬಹುದಾಗಿದೆ.
ಸಮಾವೇಶದ ನಿರ್ವಹಣೆಗಾಗಿ ಕಾಲೇಜು ಪ್ರಾಂಶುಪಾಲ ಡಾ.ಅನಿಲ್ ಕುಮಾರ್ ವಿ.ಎಸ್, ವಿಭಾಗ ಮುಖ್ಯಸ್ಥೆ ಪ್ರೊ.ಸುಜಾತ ಎಸ್, ಪ್ರಾಧ್ಯಾಪಕರಾದ ಡಾ.ರತ್ನಾಕರ ಎಂ, ಡಾ.ರಾಧಾಕೃಷ್ಣ ಬೆಳ್ಳೂರು, ಡಾ.ಶ್ರೀಧರ ಎನ್, ಡಾ.ಸವಿತಾ ಬಿ, ಡಾ.ವೇದಾವತಿ ಎಸ್, ಡಾ.ಆಶಾಲತಾ ಸಿ.ಕೆ, ಪ್ರೊ.ಲಕ್ಷ್ಮಿ ಕೆ. ಇವರನ್ನೊಳಗೊಂಡ ಅಂತಾರಾಷ್ಟ್ರೀಯ ಸಮಾವೇಶ ಸಮಿತಿಯನ್ನು ರಚಿಸಲಾಗಿದೆ.