ರಿಯೊ ಡಿ ಜನೈರೊ: ಬ್ರೆಜಿಲ್ ದೇಶದ ಪ್ರಸಿದ್ಧ ಪ್ರವಾಸಿ ನಗರ ಬಾರ್ಸಿಲೋನಾದ ಸಮೀಪ ಲಘು ವಿಮಾನ ಅಪಘಾತಕ್ಕೀಡಾಗಿದ್ದು 14 ಜನ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಿಯೊ ಡಿ ಜನೈರೊ: ಬ್ರೆಜಿಲ್ ದೇಶದ ಪ್ರಸಿದ್ಧ ಪ್ರವಾಸಿ ನಗರ ಬಾರ್ಸಿಲೋನಾದ ಸಮೀಪ ಲಘು ವಿಮಾನ ಅಪಘಾತಕ್ಕೀಡಾಗಿದ್ದು 14 ಜನ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹವಾಮಾನ ವೈಪರೀತ್ಯದಿಂದಾಗಿ ಲಘು ಪ್ರಯಾಣಿಕರ ವಿಮಾನ ಅಪಘಾತಕ್ಕೀಡಾಗಿದೆ ಎಂದು ಬ್ರೆಜಿಲ್ ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಮಾನ ಲ್ಯಾಂಡಿಂಗ್ ಆಗುವ ಸಮಯದಲ್ಲಿ ಈ ದುರಂತ ಸಂಭವಿಸಿದೆ. ಬಿರುಗಾಳಿಯಿಂದಾಗಿ ವಿಮಾನವನ್ನು ರನ್ ವೇಯ ಮಧ್ಯದಲ್ಲಿ ಇಳಿಸಲು ಪೈಲಟ್ ಯತ್ನಸಿದ್ದರಿಂದ ಅಪಘಾತವಾಯಿತು ಎಂದು ವಿಮಾನಯಾನ ಸಿಬ್ಬಂದಿ ಹೇಳಿದ್ದಾರೆ.
ಮೃತ 14 ಜನರ ಪೈಕಿ ಇಬ್ಬರು ವಿಮಾನದ ಸಿಬ್ಬಂದಿ ಹಾಗೂ ಒಬ್ಬರು ಪೈಲಟ್ ಎಂದು ಪೊಲೀಸರು ಹೇಳಿದ್ದಾರೆ.