ಬದಿಯಡ್ಕ: ನವೋತ್ಥಾನ ನಾಯಕ ಮಹಾತ್ಮಾ ಅಯ್ಯಂಗಾಳಿಯವರ 160ನೇ ಜನ್ಮದಿನೋತ್ಸವ ಮತ್ತು ಪ್ರತಿಭಾ ಪುರಸ್ಕಾರ ವಿತರಣೆ ಬದಿಯಡ್ಕ ಸಂಸ್ಕøತಿಭವನದಲ್ಲಿ ಜರಗಿತು.
ಅಂಬೇಡ್ಕರ್ ವಿಚಾರ ವೇದಿಕೆಯ ಆಶ್ರಯದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ ಅಧ್ಯಕ್ಷತೆ ವಹಿಸಿದ್ದರು. ಕವಿ ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಯ್ಯಂಗಾಳಿ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ದಮನಿತರ ಧ್ವನಿಯಾಗಿ, ಸವರ್ಣೀಯರ ಸಿಂಹಸ್ವಪ್ನವಾಗಿದ್ದ ಮಹಾತ್ಮನ ಕ್ರಿಯಾಶಕ್ತಿ, ಧೀಶಕ್ತಿಯ ಚಿತ್ರಣ ನೀಡಿದರು. ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಾ ಬಾರಡ್ಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅತ್ಯುನ್ನತ ಶ್ರೇಣಿಯಲ್ಲಿ ಎಂ.ಫಿಲ್ ಪದವಿ ಪಡೆದ ಸುಜಿತ್ ಕುಮಾರ್ ಬೇಕೂರು, ಸುಜಾತಾ ಕನಿಯಾಲ, ಸುಜಾತಾ ಮಾಣಿಮೂಲೆ, ಸಂಧ್ಯಾ ವಿ., ಪ್ಲಸ್ ಟು ವಿದ್ಯಾರ್ಥಿ ಸಾಯಿಪ್ರಸಾದ್, ಸ್ಕೌಟ್‍ನಲ್ಲಿ ವಿಶೇಷ ಸಾಧನೆಗೈದರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯರಾದ ಶಂಕರ ಡಿ., ಶ್ಯಾಮಪ್ರಸಾದ ಮಾನ್ಯ, ಸಾಮಾಜಿಕ ಕಾರ್ಯಕರ್ತೆ ಸುಮತಿ, ಪದ್ಮನಾಭ ಚೇನೆಕ್ಕೋಡು, ಶಂಕರ ಸ್ವಾಮಿಕೃಪಾ ಶುಭಹಾರೈಸಿದರು. ಸುರೇಖಾ ಬಾರಡ್ಕ, ಪದ್ಮಾವತಿ ಏದಾರು, ಸುಪ್ರಿಯಾ ಟೀಚರ್, ಪುಷ್ಪಿತಾ, ರಂಜಿತಾ ಪಟ್ಟಾಜೆ, ರೋಹಿತ್ ಮೊದಲಾದವರಿದ್ದರು. ಇದೇ ಸಂದಭರ್Àದಲ್ಲಿ ಪ್ರತಿಭಾ ಪುರಸ್ಕಾರ ಪ್ರಾಯೋಜಕರಾದ ದಿ. ಬಿ.ಎಂ.ಈಶ್ವರ ಮಾಸ್ತರ್ ಅವರ ಧರ್ಮಪತ್ನಿ ದಿ.ಅಕ್ಕಮ್ಮ ಅವರ ಸಂಸ್ಮರಣೆ ನಡೆಯಿತು. ಗೋಪಾಲಕೃಷ್ಣ ಮಂಜೇಶ್ವರ ುಪಸ್ಥಿತರಿದ್ದರು. ಪುರಸ್ಕಾರ ಪಡೆದವರು ಅಂಬೇಡ್ಕರ್ ವಿಚಾರ ವೇದಿಕೆಗೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯ ಸಂಚಾಲಕ ಸುಂದರ ಬಾರಡ್ಕ ಸ್ವಾಗತಿಸಿ, ಹಿರಿಯ ಸದಸ್ಯ ವಿಜಯ ಕುಮಾರ್ ಬಾರಡ್ಕ ವಂದಿಸಿದರು. ಅಧ್ಯಕ್ಷ ರಾಮ ಪಟ್ಟಾಜೆ ನಿರೂಪಿಸಿದರು.