ತಿರುವನಂತಪುರಂ: ರಾಜ್ಯದಲ್ಲಿ ಅನ್ಯರಾಜ್ಯ ಕಾರ್ಮಿಕರು ಒಳಗೊಂಡ ಗಂಭೀರ ಅಪರಾಧಗಳಲ್ಲಿ ಗಣನೀಯ ಹೆಚ್ಚಳವಾಗಿದೆ. ಆರು ವರ್ಷಗಳಲ್ಲಿ ಅವರ ವಿರುದ್ಧ 5,202 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 161 ಕೊಲೆಗಳು ಸೇರಿವೆ.
ಅನ್ಯರಾಜ್ಯ ಕಾರ್ಮಿಕರ ಲಕ್ಷ್ಯವಾಗಿರಿಸಿ ನಡೆಸಿದ ಅಧ್ಯಯನ ವರದಿಯಲ್ಲಿ ಈ ಆಘಾತಕಾರಿ ಮಾಹಿತಿ ಸಿಕ್ಕಿದೆ. ಇದು 2016ರ ಅಂಕಿ ಅಂಶ. ಜನಮೈತ್ರಿ ಪೋಲೀಸ್ ಹಾಗೂ ಕಾರ್ಮಿಕ ಇಲಾಖೆಯಿಂದ ಮಾಹಿತಿ ಸಂಗ್ರಹಣೆ ನಡೆದಿದೆ. ಕೊಲೆ, ಅತ್ಯಾಚಾರ, ಮಾದಕ ದ್ರವ್ಯ ಮಾರಾಟ ಮತ್ತು ಕಳ್ಳತನದಂತಹ ಅಪರಾಧಗಳಲ್ಲಿ ಅವರಲ್ಲಿ ಹೆಚ್ಚಿನ ಆರೋಪಿಗಳಾಗಿದ್ದಾರೆ.
ಅನ್ಯರಾಜ್ಯ ಕಾರ್ಮಿಕರ ಹೆಸರು, ವಿಳಾಸ, ಬ್ಯಾಂಕ್ ಖಾತೆ, ಗುತ್ತಿಗೆದಾರರ ಮಾಹಿತಿ ಸಂಗ್ರಹಿಸಲಾಗಿದೆ. ಆಲುವಾದಲ್ಲಿ ಐದು ªಷರ್Àದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಂದ ನಂತರ ಮಾಹಿತಿ ಸಂಗ್ರಹಣೆ ಆರಂಭವಾಗಿದೆ. ಈ ಅಂಕಿ ಅಂಶವೂ ಅಪೂರ್ಣವಾಗಿದೆ ಎಂದು ತಜ್ಞರು ಗಮನಸೆಳೆದಿದ್ದಾರೆ.
ಅನ್ಯರಾಜ್ಯ ಕಾರ್ಮಿಕರು 30 ಲಕ್ಷ ದಾಟಿದ್ದಾರೆ ಎಂದು ಯೋಜನಾ ಮಂಡಳಿ ಹೇಳಿದಾಗಲೂ ಸರ್ಕಾರದ ಅಂದಾಜಿನ ಪ್ರಕಾರ ಐದೂವರೆ ಲಕ್ಷ ಮಾತ್ರ. ಆವಾಸ್ ವಿಮಾ ಯೋಜನೆಯಡಿ ನೋಂದಣಿಯಾದವರ ಅಂಕಿಅಂಶಗಳು ಮಾತ್ರ ಸರ್ಕಾರದ ಬಳಿ ಇವೆ. ವಾಸ್ತವವೆಂದರೆ ಅಪರಾಧದಲ್ಲಿ ತೊಡಗಿರುವ ಜನರು ಸರ್ಕಾರದ ಯೋಜನೆಗಳಲ್ಲಿ ಭಾಗವಹಿಸುವುದಿಲ್ಲ. ಆದ್ದರಿಂದ, ಅನ್ಯರಾಜ್ಯ ಕಾರ್ಮಿಕರ ಬಗ್ಗೆ ಸರ್ಕಾರದ ಬಳಿ ನಿಖರವಾದ ಮಾಹಿತಿ ಇಲ್ಲ. ಸರ್ಕಾರಿ ಇಲಾಖೆಗಳು ಸಾರ್ವಜನಿಕ ಆಕ್ರೋಶವನ್ನು ಹೆಚ್ಚಿಸುವ ಅಪರಾಧಗಳ ಸಂದರ್ಭದಲ್ಲಿ ಮಾತ್ರ ಎಣಿಕೆಯನ್ನು ನಡೆಸುತ್ತವೆ.