HEALTH TIPS

ಕಣಿಪುರ ಕ್ಷೇತ್ರದ ಪುನರ್ ನವೀಕರಣ-ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೆ-ಬೆಡಿ ಉತ್ಸವ ಫೆಬ್ರವರಿ 16 ರಿಂದ

                         ಕುಂಬಳೆ: ಇತಿಹಾಸ ಪ್ರಸಿದ್ದ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮ ಕಲಶಾಭಿಷೇಕ ಮಹೋತ್ಸವ ಹಾಗೂ ವಾರ್ಷಿಕ ಜಾತ್ರಾ ಉತ್ಸವ  2024ರ ಫೆ.16ರಿಂದ 28ರವರೆಗೆ ನಡೆಯಲಿದೆ ಎಂದು ಜೀರ್ಣೋದ್ಧಾರ ಬ್ರಹ್ಮ ಕಲಶ ಸಮಿತಿಯ ಪದಾಧಿಕಾರಿಗಳು ನಿನ್ನೆ ಕುಂಬಳೆ ಪ್ರೆಸ್ ಪೋರಂನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ವಿಶಿಷ್ಟವಾಗಿ ಪುನರ್ ನವೀಕರಣಗೊಂಡಿರುವ ಶ್ರೀಕ್ಷೇತ್ರದ ಬ್ರಹ್ಮಕಲಶೋತ್ಸವ  ಫೆಬ್ರವರಿ 21 ರಂದು ಮಧ್ಯಾಹ್ನ 12:21 ರಿಂದ 1:42 ರ ಮುಹೂರ್ತದಲ್ಲಿ ದೇಲಂಪಾಡಿ ಗಣೇಶ ತಂತ್ರಿವರ್ಯದ ನೇತೃತ್ವದಲ್ಲಿ ನಡೆಯಲಿದೆ. 24 ರಂದು ಬ್ರಹ್ಮಕಲಶಾಭಿμÉೀಕ ನಡೆಯಲಿದೆ. 25 ರಿಂದ 29 ರವರೆಗೆ ವಾರ್ಷಿಕ ಜಾತ್ರಾ ಉತ್ಸವ.ನಡೆಯಲಿದ್ದು, 28ರಂದು ರಾತ್ರಿ ಬೆಡಿ ಉತ್ಸವ ನಡೆಯಲಿದೆಯೆಂದು ಬ್ರಹ್ಮಕಲಶೋತ್ಸವ ಸಮಿತಿಯ ಸ್ಮರಣ ಸ|ಂಚಿಕೆ ಹಾಗೂ ಸಾಂಸ್ಕøತಿಕ ಉತ್ಸವ ಸಮಿತಿ ಸಂಚಾಲಕ ನ್ಯಾಯವಾದಿ, ಕೀರ್ತನಕಾರ ಶಂ.ನಾ. ಅಡಿಗ ಅವರು ಮಾಹಿತಿ ನೀಡಿದರು.

                   ಸಾಮಾನ್ಯವಾಗಿ ಜನವರಿಯ ಮಕರ ಮಾಸದಲ್ಲಿ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಮಹೋತ್ಸವವು ಜರಗುವುದು ವ|ಆಡಿಕೆ. ಆದರೆ ಇದೀಗ ಪುನರ್ ನವೀಕರಣವು ಸುಧೀರ್ಘ ವರ್ಷಗಳ ಬಳಿಕ ನಡೆಯುತ್ತಿದ್ದು, ಶ|ರೀದೇವರು ಬಾಲಾಲಯದಲ್ಲಿ ಪ್ರತಿಷ್ಠೆಗೊಂಡಿಡಿರುವುದರಿಂದ ವಾರ್ಷಿಕ ಜಾತ್ರೆ ನಡೆಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲಿ ಬ್ರಹ್ಮಕಲಶ ವಿಧಿಗಳ ಬಳಿಕ ಉತ್ಸವ ನಡೆಯಲಿದೆ. ಭಕ್ತಾದಿಗಳು ಸಹಕರಿಸಬೇಕೆಂದು ಅವರು ಈ ಸಂದರ್ಭ ವಿನಂತಿಸಿದರು.


                    ಈ ದೇವಾಲಯದ ಕೊನೆಯ ಜೀರ್ಣೋದ್ಧಾರ ಕಾರ್ಯವನ್ನು 1989 ರಲ್ಲಿ ನಡೆದಿತ್ತು. ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಕಣ್ವ ಮಹರ್ಷಿಗಳಿಂದ ಪ್ರತಿಷ್ಠೆಗೊಂಡ ಪವಿತ್ರ ಕ್ಷೇತ್ರವಾದ ಕಣಿಪುರ ಕುಂಬಳೆ ಸೀಮೆಯ ನಾಲ್ಕು ಪ್ರಧಾನ ಆಲಯಗಳಲ್ಲಿ ಒಂದಾಗಿದೆ. ಐತಿಹಾಸಿಕ ಹಿನ್ನೆಲೆಯ ಶ್ರೀಕ್ಷೇತ್ರದ ಪುನರುತ್ಥಾನದಲ್ಲಿ ರಾಜ್ಯ ದೈವಸ್ವಂ ಬೋರ್ಡ್ ಹಾಗೂ ಸಹೃದಯ ಭಕ್ತರ ಕೊಡುಗೆ ಅಪೂರ್ವವಾದುದು. ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ವೇಳೆ ವಿವಿಧ ವೈದಿಕ ವಿಧಿಗಳ ಜೊತೆಗೆ ಅದ್ದೂರಿಯ ಸಾಂಸ್ಕøತಿಕ ಕಾರ್ಯಕ್ರಮಗಳಿಗಾಗಿ ಎರಡು ಪ್ರಮುಖ ವೇದಿಕೆಗಳ ಮೂಲಕ ನೂರಕ್ಕೂ ಹೆಚ್ಚು ಸಾಂಸ್ಕøತಿಕ ವೈವಿಧ್ಯಗಳನ್ನು ಪ್ರಸ್ತುತಪಡಿಸಲು ದೇಶಾದ್ಯಂತದ ವಿವಿಧ ವಲಯದ ಕಲಾವಿದರು, ಕಲಾಪೋಷಕರು ಭಾಗವಹಿಸುವರು. ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ದಿಗ್ಗಜರು ಪಾಲ್ಗೊಳ್ಳುವ ಈ ಸಮಾರಂಭ ಇತಿಹಾಸ ನಿರ್ಮಿಸಲು ಸಾಧ್ಯವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು.

           ಸುದ್ದಿಗೋಷ್ಠಿಯಲ್ಲಿ. ಪುನರ್ ನವೀಕರಣ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ರಘುನಾಥ ಪೈ, ಕಾರ್ಯನಿರ್ವಹಣಾಧಿಕಾರಿ. ಕೆ.ಪಿ. ಸುನೀಲ್ ಕುಮಾರ್, ಉಪಾಧ್ಯಕ್ಷರುಗಳಾದ ಮಂಜುನಾಥ ಆಳ್ವ, ಸುಧಾಕರ ಕಾಮತ್, ಜೆ.ಎಂ. ಜಯಕುಮಾರ್, ಕಾರ್ಯದರ್ಶಿಗಳಾದ ವಿಕ್ರಮ್ ಪೈ, ದಾಮೋದರ, ಕೆ. ಶಂಕರ ಆಳ್ವ, ಸದಸ್ಯ ಸಂಜೀವ ಅಮೀನ್ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries