ನವದೆಹಲಿ (PTI): 'ಪ್ರಧಾನಿ ನರೇಂದ್ರ ಮೋದಿ ಅವರು ದ್ವಾರಕಾದಲ್ಲಿರುವ ಯಶೋಭೂಮಿ ಹೆಸರಿನ ಇಂಡಿಯಾ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಆಯಂಡ್ ಎಕ್ಸ್‌ಪೊ ಸೆಂಟರ್ (ಐಐಸಿಸಿ) ಅನ್ನು ಭಾನುವಾರ ಉದ್ಘಾಟಿಸಲಿದ್ದಾರೆ. ಇದರೊಂದಿಗೆ ದ್ವಾರಕ ಸೆಕ್ಟರ್ 21ರಿಂದ ದ್ವಾರಕಾ ಸೆಕ್ಟರ್ 25ರವರೆಗೆ ವಿಸ್ತರಿಸಿರುವ ದೆಹಲಿ ಏರ್‌ಪೋರ್ಟ್ ಮೆಟ್ರೊ ಎಕ್ಸ್‌ಪ್ರೆಸ್ ಮಾರ್ಗವನ್ನೂ ಅವರು ಉದ್ಘಾಟಿಸಲಿದ್ದಾರೆ' ಎಂದು ಅಧಿಕಾರಿಗಳು ಹೇಳಿದ್ದಾರೆ.
'ದೇಶದಲ್ಲಿ ಸಭೆಗಳು, ಸಮಾವೇಶಗಳು ಹಾಗೂ ಪ್ರದರ್ಶನಗಳನ್ನು ನಡೆಸಲು ವಿಶ್ವದರ್ಜೆಯ ಮೂಲ ಸೌಕರ್ಯ ಹೊಂದಬೇಕೆಂಬುದು ಮೋದಿ ಅವರ ಧ್ಯೇಯ. ಈ ಧ್ಯೇಯಕ್ಕೆ ಯಶೋಭೂಮಿಯ ಕಾರ್ಯಾಚರಣೆ ಉತ್ತೇಜನ ನೀಡಲಿದೆ' ಎಂದರು.
'ಯಶೋಭೂಮಿಯು ಒಟ್ಟು 8.9 ಲಕ್ಷ ಚದರ ಮೀಟರ್‌ಗಿಂತ ಹೆಚ್ಚಿನ ಯೋಜನಾ ಪ್ರದೇಶ ಮತ್ತು 1.8 ಲಕ್ಷ ಚದರ ಮೀಟರ್‌ಗಿಂತಲೂ ಹೆಚ್ಚಿನ ಒಟ್ಟು ನಿರ್ಮಿತ ಪ್ರದೇಶದಲ್ಲಿ ಇದೆ. ಸಮಾವೇಶ ಭವನವು 73 ಸಾವಿರ ಚದರ ಮೀಟರ್‌ನಲ್ಲಿ ನಿರ್ಮಿತವಾಗಿದ್ದು, 15 ಕೋಣೆಗಳಿವೆ. ಸಭಾಂಗಣ, ವೈಭವಯುತವಾದ ಬಾಲ್ ರೂಂ, ಒಟ್ಟು 11 ಸಾವಿರ ಪ್ರತಿನಿಧಿಗಳು ಭಾಗವಹಿಸಬಹುದಾದ ಸಾಮರ್ಥ್ಯವಿರುವ 13 ಸಭಾ ಕೋಣೆಗಳಿವೆ' ಎಂದರು.