HEALTH TIPS

ಓಂಕಾರೇಶ್ವರದಲ್ಲಿ ಸೆ.18 ರಂದು 108 ಅಡಿ ಎತ್ತರದ ಶ್ರೀ ಆದಿ ಶಂಕರಾಚಾರ್ಯರ ಏಕತಾ ಪ್ರತಿಮೆ ಅನಾವರಣ

              ಮಧ್ಯಪ್ರದೇಶ: ಮಧ್ಯಪ್ರದೇಶ ಸರ್ಕಾರವು ಭಾರತದಲ್ಲಿನ 12 ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದಾದ ಓಂಕಾರೇಶ್ವರದಲ್ಲಿ 108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಏಕತಾ ಮೂರ್ತಿಯನ್ನು ಸೆಪ್ಟೆಂಬರ್ 18 ರಂದು ಅನಾವರಣಗೊಳಿಸಲಿದೆ.

             ಈ ಕುರಿತು ನಾಗರಿಕ ಸಂಬಂಧ ಇಲಾಖೆ ಈಗಾಗಲೇ ಪ್ರಕಟಣೆ ಹೊರಡಿಸಿದೆ. ಇಂದೋರ್‌ನಿಂದ 80 ಕಿಮೀ ದೂರದಲ್ಲಿರುವ ಓಂಕಾರೇಶ್ವರದಲ್ಲಿ ನರ್ಮದಾ ನದಿಯ ದಡದಲ್ಲಿರುವ ಮಾಂಧಾತಾ ಪರ್ವತದ ಮೇಲೆ 'ಏಕತೆಯ ಪ್ರತಿಮೆ' ಅನಾವರಣಗೊಳ್ಳಲಿದೆ.

            ಓಂಕಾರೇಶ್ವರದಲ್ಲಿ 'ಅದ್ವೈತ ಲೋಕ' ಹೆಸರಿನ ಮ್ಯೂಸಿಯಂ, ಆಚಾರ್ಯ ಶಂಕರ್ ಇಂಟರ್‌ನ್ಯಾಶನಲ್ ಅದ್ವೈತ ವೇದಾಂತ ಇನ್‌ಸ್ಟಿಟ್ಯೂಟ್ ಮತ್ತು 36 ಹೆಕ್ಟೇರ್‌ನಲ್ಲಿ 'ಅದ್ವೈತ ವನ' ಅಭಿವೃದ್ಧಿ ಪಡಿಸಲಾಗಿದೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದೇಶದ ಎಲ್ಲೆಡೆಯಿಂದ ಸಾಧುಗಳು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

                   ಶಿವನ ಅವತಾರವೆಂದು ಪರಿಗಣಿಸಲ್ಪಟ್ಟಿರುವ ಆದಿ ಶಂಕರಾಚಾರ್ಯರು ನಾಲ್ಕು ವರ್ಷಗಳ ಕಾಲ ಓಂಕಾರೇಶ್ವರದಲ್ಲಿ ನೆಲೆಸಿದ್ದರು. ಕೇರಳದಲ್ಲಿ ಜನಿಸಿದ ಶಂಕರಾಚಾರ್ಯರು ತಮ್ಮ ಬಾಲ್ಯದಲ್ಲಿ ಸನ್ಯಾಸ ಸ್ವೀಕರಿಸಿದ ನಂತರ ಓಂಕಾರೇಶ್ವರವನ್ನು ತಲುಪಿದರು. ಅಲ್ಲಿ ಅವರು ತಮ್ಮ ಗುರು ಗೋವಿಂದ್ ಭಗವತ್ಪಾದರನ್ನು ಭೇಟಿಯಾದರು ಎಂದು ಹೇಳಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶಂಕರಾಚಾರ್ಯರು 12 ನೇ ವಯಸ್ಸಿನಲ್ಲಿ ಓಂಕಾರೇಶ್ವರವನ್ನು ತೊರೆದರು. ಅದ್ವೈತ ವೇದಾಂತದ ತತ್ತ್ವಶಾಸ್ತ್ರವನ್ನು ಜನರಿಗೆ ತಿಳಿಸಲು ದೇಶದ ಇತರ ಭಾಗಗಳಿಗೆ ಪ್ರಯಾಣಿಸಿದರು ಎಂದು ಹೇಳಲಾಗುತ್ತದೆ.

                                ಅದ್ವೈತ ಸಿದ್ಧಾಂತ ಪ್ರಚಾರ ಮಾಡಿದ ಶಂಕರಾಚಾರ್ಯರು
                ಆದಿ ಶಂಕರಾಚಾರ್ಯರು ಅದ್ವೈತ ಸಿದ್ಧಾಂತವನ್ನು ಭಾರತದಾದ್ಯಂತ ಕಾಲ್ನಡಿಗೆಯಲ್ಲಿ ಹೊರಟು ಪ್ರಚಾರ ಮಾಡಿದರು. ಅಗತ್ಯವಾದ ಪೀಠಗಳು ಮತ್ತು ಧಾರ್ವಿುಕ ಕ್ಷೇತ್ರಗಳನ್ನು ಸ್ಥಾಪಿಸಿದರು. ಸದ್ಗುರುಗಳ ಸಹವಾಸ, ಶಿಷ್ಯತ್ವ, ದೇವರ ಆರಾಧನೆ, ನಿಯಮಿತ ಮಂಗಳ ಕಾರ್ಯಗಳು, ಧ್ಯಾನ, ಯೋಗ, ಸತ್ಸಂಗ ಮತ್ತು ಭಕ್ತಿ ಅಭ್ಯಾಸಗಳಿಂದ ಪರಬ್ರಹ್ಮ ತತ್ತ್ವವನ್ನು ಅರಿತುಕೊಳ್ಳಬಹುದು ಮತ್ತು ಅನುಭವಿಸಬಹುದು ಎಂದು ಶಂಕರರು ಕಲಿಸಿದರು. ಇದಕ್ಕಾಗಿ ಏನು ಮಾಡಬೇಕೆಂದು ಹೇಳುವ ಐದು ಸೂತ್ರಗಳನ್ನು ಸಾಧನಾ ಪಂಚಕಂ ರೂಪದಲ್ಲಿ ಅತ್ಯುನ್ನತ ಮಟ್ಟದಲ್ಲಿ ನೀಡಲಾಗಿದೆ. ಇದರಲ್ಲಿ ವಿಷಯಗಳು ತುಂಬಾ ಸುಲಭವೆಂದು ತೋರುತ್ತದೆ. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಸಾಕಷ್ಟು ಶಿಸ್ತು, ಸಂಯಮ ಮತ್ತು ಪರಿಶ್ರಮದ ಅಗತ್ಯವಿದೆ.
                  ಅನೇಕ ಗುರುಗಳು ಮತ್ತು ಋಷಿಗಳು ಭಾರತದಲ್ಲಿ ಜನಿಸಿದರು. ಆಧ್ಯಾತ್ಮಿಕ ಸಂದೇಶವನ್ನು ಪ್ರಚಾರ ಮಾಡಿದರು, ಆದರೆ ಅದ್ವೈತದ ಸಾರ, ಶಂಕರರು ಪ್ರತಿಪಾದಿಸಿದ ಧಾರ್ವಿುಕ ಸಿದ್ಧಾಂತಗಳು ಮತ್ತು ಆಚರಣೆಗಳು ಇನ್ನೂ ಅಖಂಡ ಮತ್ತು ಅಧಿಕೃತವಾಗಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries