ಕಾಸರಗೋಡು: ಜಿಲ್ಲೆಯಲ್ಲಿ ಮಂಜೂರಾಗಿರುವ ಒಂಬತ್ತು ಅಕ್ಷಯ ಕೇಂದ್ರಗಳನ್ನು ನಡೆಸಲಿರುವ ಉದ್ಯಮಿಗಳ ಆಯ್ಕೆಗೆ ಸಂಬಂಧಿಸಿದಂತೆ ಸೆ.19ರಂದು ನಡೆಯಬೇಕಿದ್ದ ಪ್ರಮಾಣಪತ್ರ ತಪಾಸಣೆಯನ್ನು ವಿನಾಯಕ ಚತುರ್ಥಿ ಅಂಗವಾಗಿ ಸ್ಥಳೀಯ ರಜೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸೆ.20ಕ್ಕೆ ಮುಂದೂಡಲಾಗಿದೆ.
ಸೆಪ್ಟೆಂಬರ್ 18 ರಂದು ಬೆಳಿಗ್ಗೆ 10 ರಿಂದ 11 ರವರೆಗೆ ಧರ್ಮತ್ತಡ್ಕ, 11 ರಿಂದ 12 ರವರೆಗೆ ಗಾಡಿಗುಡ್ಡೆ, ಮಧ್ಯಾಹ್ನ 12 ರಿಂದ 1 ರವರೆಗೆ ಪಾವೂರು, 20 ರಂದು ಬೆಳಿಗ್ಗೆ 10 ರಿಂದ 11ರವರೆಗೆ ಕಾಞÂರಪೆÇಯಿಲ್, 12 ರಿಂದ 1 ರವರೆಗೆ ಚವರಕ್ಕಾಡ್, 12 ರಿಂದ 1 ರವರೆಗೆ ಕಾರಿ, ಮಧ್ಯಾಹ್ನ 2 ರಿಂದ 3 ರವರೆಗೆ ಉದಯನಗರ, 3 ರಿಂದ 4 ರವರೆಗೆ ಕಂಬಲ್ಲೂರು, ಮತ್ತು 4 ರಿಂದ 5 ರವರೆಗೆ ನಲ್ಲೋಂಪುಳದಲ್ಲಿ ಪ್ರಮಾಣಪತ್ರ ಪರಿಶೀಲನೆ ನಡೆಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ವೆಬ್‍ಸೈಟ್ www.akshaya.kerala.gov.in ಹಾಗೂ ದೂರವಾಣಿ ಸಂಖ್ಯೆ(04994 227170)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.