ಬದಿಯಡ್ಕ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 52ನೇ ವರ್ಷದ ಶ್ರೀಗಣೇಶೋತ್ಸವವು ಬದಿಯಡ್ಕ ಗಣೇಶಮಂದಿರದಲ್ಲಿ ಸೆ.18ರಿಂದ ಸೆ.20ರ ತನಕ ಜರಗಲಿದೆ. ಕಾರ್ಯಕ್ರಮದ ಅಂಗವಾಗಿ ಸೆ.18 ಸೋಮವಾರದಂದು ಬೆಳಗ್ಗೆ ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ಟರ ನೇತೃತ್ವದಲ್ಲಿ ಗಣಪತಿ ಹೋಮ, 9 ಗಂಟೆಯಿಂದ ವಿವಿಧ ಭಜನಾ ಸಂಘಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ.
ಸೆ.19ರಂದು ಮಂಗಳವಾರ ಬೆಳಗ್ಗೆ ಶ್ರೀ ಮಹಾಗಣಪತಿ ಪ್ರತಿಷ್ಠೆ, ಧ್ವಜಾರೋಹಣ, ರಾಷ್ಟ್ರಗೀತೆ, ಗಣಪತಿ ಹೋಮ, ವಿವಿಧ ಭಜನಾ ಸಂಘಗಳಿಂದ ಭಜನೆ, 10 ರಿಂದ ವಿವಿಧ ಸ್ಪರ್ಧೆಗಳು. 11 ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕರಿಂಬಿಲ ಲಕ್ಷ್ಮಣ ಪ್ರಭು ಅಧ್ಯಕ್ಷತೆಯಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ಸಹಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ. ಅಪರಾಹ್ನ 2.30ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ, 5ರಿಂದ ಮಾ. ತನ್ಮಯ್ ಹಾಗೂ ತಸ್ಮೈ ಇವರಿಂದ ನಾದಸುರಭಿ ಕಾರ್ಯಕ್ರಮ, ಸಂಜೆ 6ಕ್ಕೆ ದೀಪಾರಾಧನೆ, 7ರಿಂದ ವಿದುಷಿ ಯೋಗೀಶ್ವರೀ ಜಯಪ್ರಕಾಶ್, ವೈಶ್ಣವೀ ನಾಟ್ಯಾಲಯ ಪುತ್ತೂರು ಇವರ ಶಿಷ್ಯವೃಂದದ ಬದಿಯಡ್ಕ ಶಾಖಾ ವಿದ್ಯಾರ್ಥಿಗಳಿಂದ ನೃತ್ಯಾರ್ಪಣಂ, ರಾತ್ರಿ 8.30ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ.
ವೈಭವದ ಶೋಭಾಯಾತ್ರೆ :
ಸೆ.20ರಂದು ಬೆಳಗ್ಗೆ 7.30ಕ್ಕೆ ಉಷಃಪೂಜೆ, ವಿವಿಧ ಭಜನಾ ಸಂಘಗಳಿಂದ ಭಜನೆ, 11 ರಿಂದ ಸಿನೆಮಾ ಹಾಡಿನ ಸಂಗೀತ ನಿರ್ದೇಶಕ ರಾಷ್ಟ್ರೀಯ ಪ್ರಶಸ್ತಿ ವಿಜೇತ ಕಲಾರತ್ನ ಜಯರಾಮ ಮತ್ತು ಬಳಗ ಮಂಗಳೂರು ಇವರಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. 2.30ರಿಂದ ಶ್ರೀದೇವರ ಭವ್ಯ ಶೋಭಾಯಾತ್ರೆ ಆರಂಭವಾಗಲಿದ್ದು ರಾತ್ರಿ 9 ಗಂಟೆಗೆ ಪೆರಡಾಲ ಶ್ರೀ ಉದನೇಶ್ವರ ದೇವಾಲಯದ ಮುಂಭಾಗದ ವರದಾ ನದಿ ತಟದಲ್ಲಿ ಪೂಜೆ, ಪ್ರಾರ್ಥನೆ, ಧ್ವಜಾವತರಣ, ವಿಗ್ರಹ ವಿಸರ್ಜನೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಸಿಂಗಾರಿಮೇಳ, ಸಂಚಾರಿ ಭಕ್ತಿರಸಮಂಜರಿ, ತಾಂಬೋಲಂ, ಸಂಚಾರಿ ನೃತ್ಯ, ಕುಣಿತ ಭಜನೆ, ಹನುಮಾನ್ ಶೋ, ಹುಲಿಕುಣಿತ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
(ಚಿತ್ರ ಮಾಹಿತಿ: ಬದಿಯಡ್ಕ ಶ್ರೀಗಣೇಶ ಮಂದಿರದಲ್ಲಿ 52ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂತಿಮ ಸಿದ್ಧತೆ.)