ನವದೆಹಲಿ: 1983ರಲ್ಲಿ ಸೋದರ ಸೊಸೆ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಘೋಷಿಸಲಾಗಿದ್ದ 75 ವರ್ಷದ ವಕೀಲಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
ನವದೆಹಲಿ: 1983ರಲ್ಲಿ ಸೋದರ ಸೊಸೆ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಘೋಷಿಸಲಾಗಿದ್ದ 75 ವರ್ಷದ ವಕೀಲಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
'ಜಾಮೀನು ನೀಡುವುದಕ್ಕೆ ಸಂಬಂಧಿಸಿ ಅರ್ಜಿದಾರಗೆ ಕಠಿಣ ಷರತ್ತುಗಳನ್ನು ವಿಧಿಸಬೇಕು ಹಾಗೂ ಕಾಲಮಿತಿಯೊಳಗೆ ಅರ್ಜಿ ಕುರಿತು ನಿರ್ಧಾರ ಪ್ರಕಟಿಸಬೇಕು' ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಹಾಗೂ ಪಂಕಜ್ ಮಿತ್ತಲ್ ಅವರಿದ್ದ ನ್ಯಾಯಪೀಠವು ಕಲ್ಕತ್ತ ಹೈಕೋರ್ಟ್‌ಗೆ ಸೂಚಿಸಿದೆ.
40 ವರ್ಷಗಳ ಹಿಂದಿನ ಪ್ರಕರಣ ಇದಾಗಿದ್ದು, ವಕೀಲ ವನಮಾಲಿ ಚೌಧರಿ ಅವರನ್ನು ದೋಷಿ ಎಂದು ನ್ಯಾಯಾಲಯ ಹೇಳಿದೆ.
ವನಮಾಲಿ ಚೌಧರಿಗೆ ಜಾಮೀನು ನಿರಾಕರಿಸಿ ಕಲ್ಕತ್ತ ಹೈಕೋರ್ಟ್ ಕಳೆದ ಮೇ 17ರಂದು ಹೊರಡಿಸಿದ್ದ ಆದೇಶವನ್ನು ನ್ಯಾಯಪೀಠ ರದ್ದುಗೊಳಿಸಿದೆ.
'ಈ ಅಪರಾಧ ಕೃತ್ಯ 1983ರಲ್ಲಿ ನಡೆದಿತ್ತು. ಪ್ರಕರಣದ ವಿಚಾರಣೆ ವಿಳಂಬವಾಗಿರುವುದಕ್ಕೆ ಕಾರಣಗಳೂ ಇವೆ. ಅರ್ಜಿದಾರ ತಪ್ಪಿತಸ್ಥ ಎಂಬುದಾಗಿ ಕಳೆದ ಏಪ್ರಿಲ್ 23ರಂದು ತೀರ್ಪು ನೀಡುವುದರೊಂದಿಗೆ ವಿಚಾರಣೆ ಅಂತ್ಯಕಂಡಿದೆ. ಅಲ್ಲದೇ, 75 ವರ್ಷ ತುಂಬಿರುವ ಮೇಲ್ಮನವಿದಾರ ಈ ವರೆಗೆ ಜಾಮೀನಿನ ಮೇಲೆಯೇ ಹೊರಗಿದ್ದ' ಎಂಬ ಅಂಶವನ್ನು ನ್ಯಾಯಪೀಠ ಪರಿಗಣಿಸಿದೆ.