ಕಾಸರಗೋಡು: ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾಸರಗೋಡು ವತಿಯಿಂದ 68ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ. 19ರಿಂದ 23ರ ವರೆಗೆ ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜರಗಲಿದೆ.
19ರಂದು ಬೆಳಗ್ಗೆ 9ಕ್ಕೆ ಶ್ರೀಗಣೇಶ ವಿಗ್ರಹವನ್ನು ಸೂರ್ಲು ಶ್ರೀಗಣೇಶ ಮಂದಿರದಿಂದ ವಾದ್ಯಘೋಷಗಳೊಂದಿಗೆ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತಂದು, ದೇವಾಲಯದ ಪ್ರಾಂಗಣದಲ್ಲಿ ಪರತಿಷ್ಠಾಫಿಸಲಾಗುವುದು. ಮಧ್ಯಾಹ್ನ 12ಕ್ಕೆ ಧ್ವಜಾರೋಹಣ ನಡೆಯುವುದು. ಉದ್ಯಮಿ ಬಾಲಕೃಷ್ಣ ಭಂಡರಿ ಪೆರುವಾಡ್ ಸಮಾರಂಭ ಉದ್ಘಾಟಿಸುವರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಂದೀಪ್ ಭಟ್ ಅಧ್ಯಕ್ಷತೆ ವಹಿಸುವರು. ಆರೆಸ್ಸೆಸ್ ಮಂಗಳೂರು ವಿಭಾಗ ಸಂಘ ಚಾಲಕ್ ಗೋಪಾಲ ಚೆಟ್ಟಿಯಾರ್ ಪೆರ್ಲ, ವಿಠಲದಾಸ ಕಾಮತ್, ಬಾಲನ್ ಅಡ್ಕತ್ತಬೈಲ್, ಡಿ. ನಾರಾಯಣನ್ ಮೇಸ್ತ್ರಿ ಬೀರಂತಬೈಲ್ ಅತಿಥಿಗಳಾಗಿ ಭಾಗವಹಿಸುವರು. ಸಂಜೆ 7.30ಕ್ಕೆ ಧಾರ್ಮಿಕ ಸಭೆ ನಡೆಯುವುದು. ವಿವಿಧ ದಿನಗಳಲ್ಲಿ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮ , ವಿವಿಧ ಸ್ಪರ್ಧೆಗಳು ಜರುಗಲಿರುವುದು. 23ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯುವುದು. 6.30ಕ್ಕೆ ಧ್ವಜಾವರೋಹಣ, ಮಹಾಪೂಜೆ, ಶ್ರೀ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯುವುದು.