ನವದೆಹಲಿ: ಭಾರತದ ಚಂದ್ರಯಾನ-1ರ ದೂರಸಂವೇದಿ ದತ್ತಾಂಶವನ್ನು ವಿಶ್ಲೇಷಿಸುತ್ತಿರುವ ವಿಜ್ಞಾನಿಗಳು ಭೂಮಿಯಿಂದ ಹೆಚ್ಚಿನ ಶಕ್ತಿಯ ಎಲೆಕ್ಟ್ರಾನ್‌ಗಳು ಚಂದ್ರನ ಮೇಲೆ ನೀರನ್ನು ರೂಪಿಸುತ್ತಿರಬಹುದು ಎಂದು ಹೇಳಿದ್ದಾರೆ.
ನವದೆಹಲಿ: ಭಾರತದ ಚಂದ್ರಯಾನ-1ರ ದೂರಸಂವೇದಿ ದತ್ತಾಂಶವನ್ನು ವಿಶ್ಲೇಷಿಸುತ್ತಿರುವ ವಿಜ್ಞಾನಿಗಳು ಭೂಮಿಯಿಂದ ಹೆಚ್ಚಿನ ಶಕ್ತಿಯ ಎಲೆಕ್ಟ್ರಾನ್‌ಗಳು ಚಂದ್ರನ ಮೇಲೆ ನೀರನ್ನು ರೂಪಿಸುತ್ತಿರಬಹುದು ಎಂದು ಹೇಳಿದ್ದಾರೆ.
ಭೂಮಿಯ ಪ್ಲಾಸ್ಮಾ ಶೀಟ್‌ನಲ್ಲಿರುವ ಈ ಎಲೆಕ್ಟ್ರಾನ್‌ಗಳು ಚಂದ್ರನ ಮೇಲ್ಮೈಯಲ್ಲಿ ಬಂಡೆಗಳು ಮತ್ತು ಖನಿಜಗಳನ್ನು ಒಡೆಯುವ ಅಥವಾ ಕರಗಿಸುವ ಪ್ರಕ್ರಿಯೆಗಳಿಗೆ ಕಾರಣವಾಗುತ್ತಿವೆ ಎಂದು ಅಮೆರಿಕದ ಮನೋವಾದ ಹವಾಯಿ ವಿಶ್ವವಿದ್ಯಾಲಯದ (ಯುಹೆಚ್) ಸಂಶೋಧಕರ ನೇತೃತ್ವದ ತಂಡವು ಕಂಡುಹಿಡಿದಿದೆ.
ನೇಚರ್ ಆಸ್ಟ್ರಾನಮಿ ಜರ್ನಲ್‌ನಲ್ಲಿ ಪ್ರಕಟವಾಗಿರುವ ಈ ಸಂಶೋಧನೆಯಲ್ಲಿ ಚಂದ್ರನ ಮೇಲ್ಮೈನಲ್ಲಿ ನೀರಿನ ರಚನೆಗೆ ಎಲೆಕ್ಟ್ರಾನ್‌ಗಳು ಸಹಾಯ ಮಾಡಿರಬಹುದು ಎಂಬುದನ್ನು ಪತ್ತೆ ಮಾಡಲಾಗಿದೆ.
ಚಂದ್ರನ ಮೇಲೆ ನೀರಿನ ಸಾಂದ್ರತೆಗಳು ಮತ್ತು ಹಂಚಿಕೆಗಳ ಬಗ್ಗೆ ಅರಿಯುವುದರಿಂದ ಅದರ ರಚನೆ ಮತ್ತು ವಿಕಾಸವನ್ನು ಅರ್ಥಮಾಡಿಕೊಳ್ಳಲು ಹಾಗೂ ಭವಿಷ್ಯದ ಮಾನವ ಪರಿಶೋಧನೆಗೆ ನೀರಿನ ಸಂಪನ್ಮೂಲಗಳನ್ನು ಒದಗಿಸಲು ಸಹಾಯವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಹೊಸ ಸಂಶೋಧನೆಯು ಚಂದ್ರನ ಮೇಲೆ ಶಾಶ್ವತವಾಗಿ ಮಬ್ಬಾಗಿರುವ ಪ್ರದೇಶಗಳಲ್ಲಿ ಹಿಂದೆ ಪತ್ತೆಯಾಗಿರುವ ಮಂಜುಗಡ್ಡೆಯ ಮೂಲವನ್ನು ವಿವರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಚಂದ್ರನ ಮೇಲಿನ ನೀರಿನ ಅಣುಗಳ ಆವಿಷ್ಕಾರದಲ್ಲಿ ಚಂದ್ರಯಾನ-1 ನಿರ್ಣಾಯಕ ಪಾತ್ರ ವಹಿಸಿದೆ. 2008ರಲ್ಲಿ ಆರಂಭವಾದ ಈ ಮಿಷನ್, ಚಂದ್ರಯಾನ ಕಾರ್ಯಕ್ರಮದ ಅಡಿಯಲ್ಲಿ ಮೊದಲ ಉಡಾವಣೆಯಾಗಿತ್ತು.