ಚೆನ್ನೈ : ಪ್ರತಿ ಕುಟುಂಬದ ಅರ್ಹ ಯಜಮಾನಿಗೆ ತಲಾ ₹1 ಸಾವಿರದಂತೆ ರಾಜ್ಯದ 1.06 ಕೋಟಿ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಬೃಹತ್ ಸಮಾಜ ಕಲ್ಯಾಣ ಯೋಜನೆಗೆ ಸೆ.15ರಿಂದ ಚಾಲನೆ ನೀಡಲು ತಮಿಳುನಾಡು ಸರ್ಕಾರ ಸಜ್ಜಾಗಿದೆ.
ಚೆನ್ನೈ : ಪ್ರತಿ ಕುಟುಂಬದ ಅರ್ಹ ಯಜಮಾನಿಗೆ ತಲಾ ₹1 ಸಾವಿರದಂತೆ ರಾಜ್ಯದ 1.06 ಕೋಟಿ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಬೃಹತ್ ಸಮಾಜ ಕಲ್ಯಾಣ ಯೋಜನೆಗೆ ಸೆ.15ರಿಂದ ಚಾಲನೆ ನೀಡಲು ತಮಿಳುನಾಡು ಸರ್ಕಾರ ಸಜ್ಜಾಗಿದೆ.
ಮಹಿಳೆಯರ ಜೀವನದ ಗುಣಮಟ್ಟ ಹೆಚ್ಚಿಸಲು ಆರಂಭಿಸಿರುವ ಈ ಯೋಜನೆಯ ಉಪಕ್ರಮ 'ಮಗಲಿರ್ ಉರಿಮೈ ತೊಗೈ'ನಡಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು.
ಮಾಜಿ ಮುಖ್ಯಮಂತ್ರಿ, ದಿವಂಗತ ಸಿ.ಎನ್. ಅಣ್ಣಾದೊರೈ ಅವರ ಜನ್ಮದಿನದಂದು ಪ್ರಾರಂಭಿಸಲಿರುವ ಯೋಜನೆಯನ್ನು ವರ್ಚುವಲ್ ಮೂಲಕ ಪರಿಶೀಲಿಸಿದ ಮುಖ್ಯಮಂತ್ರಿ, ಇದರ ಅನುಷ್ಠಾನದ ಮೇಲ್ವಿಚಾರಣೆಯನ್ನು ಎಲ್ಲ ಜಿಲ್ಲಾಧಿಕಾರಿಗಳಿಗೆ ವಹಿಸಲು ಮುಖ್ಯ ಕಾರ್ಯದರ್ಶಿ ಶಿವದಾಸ್ ಮೀನಾ ಅವರಿಗೆ ಸೂಚಿಸಿದರು.
ಫಲಾನುಭವಿಗಳಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ಕೊಡಲಾಗುವುದು. ಈ ಯೋಜನೆಗೆ ಸುಮಾರು 1.63 ಕೋಟಿ ಅರ್ಜಿಗಳು ಬಂದಿದ್ದು, 1.06 ಕೋಟಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.