ನವದೆಹಲಿ: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟು ನಿಮ್ಮ ಬಳಿ ಇನ್ನೂ ಇದೆಯಾ? ಹಾಗಿದ್ದರೆ ಹುಷಾರು. ಏಕೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ ಹಿಂದಕ್ಕೆ ಪಡೆದಿರುವ ಈ ನೋಟುಗಳನ್ನು ಬದಲಿಸಿಕೊಳ್ಳಲು ವಿಧಿಸಲಾದ ಅಂತಿಮ ಗಡುವು ಹತ್ತಿರ ಬಂದಿದೆ.
ನವದೆಹಲಿ: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟು ನಿಮ್ಮ ಬಳಿ ಇನ್ನೂ ಇದೆಯಾ? ಹಾಗಿದ್ದರೆ ಹುಷಾರು. ಏಕೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ ಹಿಂದಕ್ಕೆ ಪಡೆದಿರುವ ಈ ನೋಟುಗಳನ್ನು ಬದಲಿಸಿಕೊಳ್ಳಲು ವಿಧಿಸಲಾದ ಅಂತಿಮ ಗಡುವು ಹತ್ತಿರ ಬಂದಿದೆ.
ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಇದೇ ಮೇ 19ರಂದು ಘೋಷಣೆ ಮಾಡಿತ್ತು.
ನೋಟು ಹಿಂಪಡೆದಿರುವುದನ್ನು ಘೋಷಿಸಿದ ಸಂದರ್ಭದಲ್ಲಿ 2 ಸಾವಿರ ರೂ. ನೋಟುಗಳು 3.32 ಲಕ್ಷ ಕೋಟಿ ರೂಪಾಯಿಯಷ್ಟು ಇದ್ದವು. ಈಗ ಆ. 31ರ ಲೆಕ್ಕದ ಪ್ರಕಾರ ಅದರ ಪ್ರಮಾಣ 0.24 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ. ಅಂದರೆ ಒಟ್ಟು ಚಲಾವಣೆಯಲ್ಲಿದ್ದ 2 ಸಾವಿರ ರೂ. ನೋಟುಗಳ ಪೈಕಿ ಶೇ. 93 ಹಿಂದಿರುಗಿಸಲ್ಪಟ್ಟಿವೆ. ಆ ಪೈಕಿ ಶೇ. 87ರಷ್ಟು ನೋಟುಗಳು ಠೇವಣಿ ಆಗಿದ್ದು, ಇನ್ನು ಶೇ. 13ರಷ್ಟನ್ನು ಬೇರೆ ಮುಖಬೆಲೆಯ ನೋಟುಗಳಿಗೆ ಬದಲಿಸಿಕೊಳ್ಳಲಾಗಿದೆ.