ಮುಂಬೈ: ರಿಲಾಯನ್ಸ್ ಫೌಂಡೇಶನ್ ಸಂಸ್ಥಾಪಕಿ ನೀತಾ ಅಂಬಾನಿ ಅವರು 2023-24ನೇ ಸಾಲಿನ 'ಸಿಟಿಜನ್ ಆಫ್ ಮುಂಬೈ' ಪ್ರಶಸ್ತಿಗೆ ಭಾಜನಾರಾಗಿದ್ದಾರೆ.
ಮುಂಬೈ: ರಿಲಾಯನ್ಸ್ ಫೌಂಡೇಶನ್ ಸಂಸ್ಥಾಪಕಿ ನೀತಾ ಅಂಬಾನಿ ಅವರು 2023-24ನೇ ಸಾಲಿನ 'ಸಿಟಿಜನ್ ಆಫ್ ಮುಂಬೈ' ಪ್ರಶಸ್ತಿಗೆ ಭಾಜನಾರಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) ಅತ್ಯಂತ ಯಶಸ್ವಿ ಕ್ರಿಕೆಟ್ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್‌ನ ಮಾಲೀಕರಾದ ನೀತಾ, ಇಂಡಿಯನ್ ಸೂಪರ್ ಲೀಗ್ ಪ್ರಾರಂಭಿಸಿದ ಫುಟ್‌ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷರೂ ಆಗಿದ್ದಾರೆ.
ನೀತಾ ಅಂಬಾನಿ ಅಂತರರಾಷ್ಟ್ರೀಯ ಒಲಿಂಪಿಕ್ ಕಮಿಟಿಯ ಸದಸ್ಯೆಯಾದ ಮೊದಲ ಭಾರತೀಯ ಮಹಿಳೆ. ಅಲ್ಲದೆ ಇವರು ನ್ಯೂಯಾರ್ಕ್‌ನ ಮೆಟ್ರೊಪೊಲಿಟನ್ ಮ್ಯೂಸಿಯಮ್ ಆಫ್ ಆರ್ಟ್‌ನ ಗೌರವ ಟ್ರಸ್ಟಿಯಾದ ಮೊದಲ ಭಾರತೀಯ ಮಹಿಳೆ ಕೂಡ ಆಗಿದ್ದಾರೆ.
ನೀತಾ ಅಂಬಾನಿ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ ಪತ್ನಿಯಾಗಿದ್ದಾರೆ.