ನವದೆಹಲಿ: 2023ರ ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್‌ನಲ್ಲಿ (GII) 132 ದೇಶಗಳ ಪೈಕಿ ಭಾರತ ಈ ವರ್ಷವೂ 40ನೇ ಶ್ರೇಯಾಂಕವನ್ನು ಕಾಯ್ದುಕೊಂಡಿದೆ ಎಂದು ಜಿನೆವಾ ಮೂಲದ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (World Intellectual Property Organization) ವರದಿ ತಿಳಿಸಿದೆ.

ಈ ಬಗ್ಗೆ ನೀತಿ ಆಯೊಗವು ಪ್ರಕಟಣೆ ಹೊರಡಿಸಿದ್ದು, ಭಾರತವು ಕಳೆದ ಕೆಲವು ವರ್ಷಗಳಿಂದೀಚೆಗೆ ಅಭಿವೃದ್ಧಿ ಹೊಂದುತ್ತಿದೆ. 2015ರಲ್ಲಿ 81ನೇ ಸ್ಥಾನದಲ್ಲಿದ್ದ ಭಾರತ ಕಳೆದ ವರ್ಷದಂತೆ ಈ ವರ್ಷವೂ 40ನೇ ಸ್ಥಾನವನ್ನು ಕಾಯ್ದುಕೊಂಡಿದೆ ಎಂದು ಹೇಳಿದೆ.
ಜಿಐಐ ಶ್ರೇಯಾಂಕದಲ್ಲಿ ಸ್ಥಿರವಾದ ಸುಧಾರಣೆಯು ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆ ಮತ್ತು ಸಾರ್ವಜನಿಕ ಮತ್ತು ಖಾಸಗಿ ಸಂಶೋಧನಾ ಸಂಸ್ಥೆಗಳು ಮಾಡಿದ ಉತ್ತಮ ಕಾರ್ಯಗಳಿಂದಾಗಿದೆ ಸಾಧ್ಯವಾಗಿದೆ ಎಂದು ಹೇಳಿದೆ.
ಜಿಐಐ ವಿಶ್ವದಾದ್ಯಂತ ಸರ್ಕಾರಗಳಿಗೆ ತಮ್ಮ ದೇಶಗಳಲ್ಲಿನ ಆವಿಷ್ಕಾರ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳನ್ನು ಅಂದಾಜು ಮಾಡಲು ಒಂದು ವಿಶ್ವಾಸಾರ್ಹ ಸಾಧನವಾಗಿದೆ ಎಂದು ನೀತಿ ಆಯೋಗ ಹೇಳಿದೆ.
2022ರಲ್ಲಿಯೂ 138 ದೇಶಗಳ ಪೈಕಿ ಭಾರತ 40ನೇ ಶ್ರೇಯಾಂಕ ಪಡೆದುಕೊಂಡಿತ್ತು.