ನವದೆಹಲಿ: 2026ರಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯ ಅಧ್ಯಕ್ಷತೆಯನ್ನು ಅಮೆರಿಕ ವಹಿಸಲಿದೆ ಎಂಬ ಸುದ್ದಿ ಕೇಳಿ ಬರುತ್ತಿದ್ದು, ಚೀನಾ ಮತ್ತು ರಷ್ಯಾ ಇದನ್ನು ತೀವ್ರವಾಗಿ ಖಂಡಿಸಿವೆ.
ನವದೆಹಲಿ: 2026ರಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯ ಅಧ್ಯಕ್ಷತೆಯನ್ನು ಅಮೆರಿಕ ವಹಿಸಲಿದೆ ಎಂಬ ಸುದ್ದಿ ಕೇಳಿ ಬರುತ್ತಿದ್ದು, ಚೀನಾ ಮತ್ತು ರಷ್ಯಾ ಇದನ್ನು ತೀವ್ರವಾಗಿ ಖಂಡಿಸಿವೆ.
2025ರ ಹೊತ್ತಿಗೆ ಜಿ-20 ಒಕ್ಕೂಟದ ಎಲ್ಲ ರಾಷ್ಟ್ರಗಳು ತಲಾ ಒಂದು ಸುತ್ತು ಅಧ್ಯಕ್ಷತೆಯ ಅವಧಿಯನ್ನು ಪೂರ್ಣಗೊಳಿಸಲಿವೆ. ಆದ್ದರಿಂದ 2008ರಲ್ಲಿ ಮೊದಲ ಶೃಂಗಸಭೆಯ ನೇತೃತ್ವ ವಹಿಸಿದ್ದ ಅಮೆರಿಕ 2026ರಲ್ಲಿ ಎರಡನೇ ಸುತ್ತಿನ ಅಧ್ಯಕ್ಷತೆ ವಹಿಸಲಿದೆ ಎನ್ನಲಾಗುತ್ತಿದೆ.
ಇದರ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆಡಳಿತ ಕಚೇರಿಯಿಂದ ಮಾಹಿತಿ ಹೊರಬಿದ್ದಿದ್ದು, ಈ ನಡೆಯನ್ನು ಚೀನಾ ಜತೆ ರಷ್ಯಾ ಕೂಡ ಪ್ರಶ್ನಿಸಿದೆ. ಕ್ಸಿ ಜಿನ್ಪಿಂಗ್ ಮತ್ತು ವ್ಲಾಡಿಮಿರ್ ಪುತಿನ್ ಶೃಂಗಸಭೆಗೆ ಗೈರಾಗಿದ್ದರೂ, ಅಮೆರಿಕ ಅಧ್ಯಕ್ಷತೆಯ ಬಗ್ಗೆ ಪ್ರಶ್ನಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಭಾರತದಲ್ಲಿ ಈ ಬಾರಿ ನಡೆಯುತ್ತಿರುವ ಜಿ-20 ಶೃಂಗಸಭೆಗೆ ವಿಶ್ವದ ಗಣ್ಯ ನಾಯಕರು ಆಗಮಿಸಿದ್ದಾರೆ. ಆದರೆ ರಷ್ಯಾ ಮತ್ತು ಚೀನಾದ ಅಧ್ಯಕ್ಷರು ಗೈರಾಗುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದವು.